ಮಂಜುಶ್ರೀ ಸೀನಿಯರ್ ಚೇಂಬರ್‌ನಿಂದ ಸರಕಾರಿ ಶಾಲೆಗೆ ಡೆಸ್ಕ್-ಬೆಂಚುಗಳ ಕೊಡುಗೆ

ಮಂಜುಶ್ರೀ ಸೀನಿಯರ್ ಚೇಂಬರ್‌ನಿಂದ ಸರಕಾರಿ ಶಾಲೆಗೆ ಡೆಸ್ಕ್-ಬೆಂಚುಗಳ ಕೊಡುಗೆ
Facebook
Twitter
LinkedIn
WhatsApp

ಬೆಳ್ತಂಗಡಿ: ಗ್ರಾಮೀಣ ಸರಕಾರಿ ಶಾಲೆಗೆ ಡೆಸ್ಕ್-ಬೆಂಚುಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಬೆಳ್ತಂಗಡಿಯ ಮಂಜುಶ್ರೀ ಸೀನಿಯರ್ ಚೇಂಬರ್‌ನವರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು.ಅಕ್ಟೊಬರ್ 2ರ ಬೆಳಿಗ್ಗೆ ಅಧ್ಯಕ್ಷ ಲ್ಯಾನ್ಸಿ ಎ. ಪಿರೇರಾರ ನೇತೃತ್ವದಲ್ಲಿ ನಾವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಬೆಳ್ತಂಗಡಿಯ ಮಂಜುಶ್ರೀ ಸೀನಿಯರ್ ಚೇಂಬರ್‌ನ ಸದಸ್ಯರು ಮೊದಲಿಗೆ ಶಾಲಾ ಮಕ್ಕಳೊಂದಿಗೆ ಗಾಂಧಿ ಜಯಂತಿಯನ್ನು ಆಚರಿಸಿದರು. ಗಾಂಧಿ ಜಯಂತಿ ಪ್ರಯುಕ್ತ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ಶಾಲೆಗೆ ಡೆಸ್ಕ್-ಬೆಂಚುಗಳನ್ನು ಕೊಡುಗೆಯಾಗಿ ನೀಡಿದರು. ಶಾಲಾಭಿವೃದ್ಧಿ ಸಮಿತಿಯವರು ಹಾಗೂ ಶಾಲಾ ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿ ಮಂಜುಶ್ರೀ ಸೀನಿಯರ್ ಚೇಂಬರ್‌ನ ಅಧ್ಯಕ್ಷ ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಮಂಜುಶ್ರೀ ಸೀನಿಯರ್ ಚೇಂಬರ್‌ನ ಅಧ್ಯಕ್ಷ ಲ್ಯಾನ್ಸಿ ಎ. ಪಿರೇರಾ, ಕಾರ್ಯದರ್ಶಿ ಹರೀಶ್ ಶೆಟ್ಟಿ, ಕೋಶಾಧಿಕಾರಿ ಗೋಪಾಲಕೃಷ್ಣ ಭಟ್, ಸದಸ್ಯರಾದ ಜೋನ್ ಅರ್ವಿನ್ ಡಿ’ಸೋಜಾ, ಭರತ್, ಸಂತೋಷ್ ಹೆಗ್ಡೆ, ದಯಾನಂದ, ರಂಜನ್ ರಾವ್, ರಾಧಾಕೃಷ್ಣ, ಪ್ರಮೋದ್ ಆರ್. ನಾಯಕ್ ಭಾಗವಹಿಸಿದ್ದರು.

Latest 5

Related Posts