ರಾಜ್ಯಮಟ್ಟದ ಶಿಕ್ಷಕ ಪುರಸ್ಕೃತರಿಗೆ ಗೌರವಾರ್ಪಣೆ

ರಾಜ್ಯಮಟ್ಟದ ಶಿಕ್ಷಕ ಪುರಸ್ಕೃತರಿಗೆ ಗೌರವಾರ್ಪಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ಜೇಸಿಐ ಮಂಜುಶ್ರೀ ವತಿಯಿಂದ ಬೆಳ್ತಂಗಡಿಯ ಜೇಸಿಐ ಸಭಾಂಗಣದಲ್ಲಿ ಅಕ್ಟೋಬರ್ 4ರಂದು ನಡೆದ ಸರಳ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಓಡಿಲ್ನಾಳ ಗ್ರಾಮದ ಕಟ್ಟದಬೈಲು ಶಾಲಾ ಮುಖ್ಯ ಶಿಕ್ಷಕ ಎಡ್ವರ್ಡ್ ಡಿ’ಸೋಜಾರನ್ನು ಗೌರವಿಸಿ, ಅಭಿನಂದನೆ ಸಲ್ಲಿಸಲಾಯಿತು. ಬೆಳ್ತಂಗಡಿ ಜೇಸಿಐ ಮಂಜುಶ್ರೀಯ ಅಧ್ಯಕ್ಷ ಸ್ವರೂಪ್ ಶೇಖರ್‌ರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷರುಗಳಾದ ನಾರಾಯಣಶೆಟ್ಟಿ, ಚಿದಾನಂದ ಇಡ್ಯಾ, ಕಿರಣ್ ಕುಮಾರ್ ಶೆಟ್ಟಿ ಪ್ರಶಾಂತ ಲಾಯಿಲ, ನಿಕಟಪೂರ್ವ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಉಪಾಧ್ಯಕ್ಷರಾದ ಪ್ರಸಾದ್ ಬಿ. ಎಸ್‌., ಆಶಾಲತ ಪ್ರಶಾಂತ್ ಮತ್ತು ಕಾರ್ಯದರ್ಶಿ ಶಂಕರರಾವ್ ಇವರುಗಳು ಉಪಸ್ಥಿತರಿದ್ದರು.

Latest 5

Related Posts