ಬಸದಿಯ ಒಳಾಂಗಣಕಕ್ಕೆ ಇಂಟರ್‌ಲಾಕ್ ಅಳವಡಿಕೆಗೆ ಚಾಲನೆ

ಬಸದಿಯ ಒಳಾಂಗಣಕಕ್ಕೆ ಇಂಟರ್‌ಲಾಕ್ ಅಳವಡಿಕೆಗೆ ಚಾಲನೆ
Facebook
Twitter
LinkedIn
WhatsApp

ಬೆಳ್ತಂಗಡಿ : ವೇಣೂರು  ಶ್ರೀ ಬಾಹುಬಲಿ ಕ್ಷೇತ್ರ ಹಾಗೂ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಒಳಾಂಗಣಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ರೂಪಾಯಿ 15 ಲಕ್ಷ ಅನುದಾನದಲ್ಲಿ ಅಳವಡಿಸಲಾಗುವ ಇಂಟರ್‌ಲಾಕ್ ಕಾಮಗಾರಿಗೆ   ಮುನಿಶ್ರೀ ೧೦೮ ಪುಣ್ಯನಂದಿ ಮಹಾರಾಜರ ಉಪಸ್ಥಿತಿಯಲ್ಲಿ ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್ ಭೂಮಿಪೂಜೆಯನ್ನು ನೆರವೇರಿಸಿದರು.ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಕಾರ್ಯಾಕಾರಿಣಿ ಸದಸ್ಯರುಗಳಾದ ಡಾ| ಕೆ. ಆರ್. ಪ್ರಸಾದ್, ಪ್ರವೀಣ್ ಅಜ್ರಿ, ನವೀನ್‌ಚಂದ್ ಬಲ್ಲಾಳ್, ಮಹಾವೀರ ಜೈನ್ ಮೂಡುಕೋಡಿ, ವಿದ್ಯಾನಂದ ಕುಮಾರ್, ವೇಣೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಅರುಣ್ ಕ್ರಾಸ್ತ, ಸುಭಾಷಿಣಿ ಉದಯಕುಮಾರ್, ಗುತ್ತಿಗೆದಾರರಾದ ಅರಿಹಂತ ಇಂಟರ್‌ಲಾಕ್ಸ್‌ನ ವಿಶ್ವಾಸ್ ಜೈನ್ ಪೆರಿಂಜೆ, ಗುಣಪಾಲ ಶೆಟ್ಟಿ, ಭರತ್‌ರಾಜ್ ಅಜ್ರಿ, ಪ್ರಮೋದ್ ಪಿ. ಮತ್ತಿತರರು ಹಾಜರಿದ್ದರು. ಪೂರ್ವಾಹ್ನ ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ನೆರವೇರಿಸಿ, ಬಾಹುಬಲಿ ಬೆಟ್ಟದ ಪುರೋಹಿತ ಚಂದ್ರನಾಥ ಇಂದ್ರ ಭೂಮಿಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿದರು.

Latest 5

Related Posts