ಬೆಳ್ತಂಗಡಿ: ಉಜಿರೆಯ ಶ್ರೀ ಶಾರದಾ ಪೂಜಾ ಸಮಿತಿ ವತಿಯಿಂದ 41ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಉತ್ಸವವು ಶ್ರೀ ಶಾರದಾ ಮಂಟಪದಲ್ಲಿ ಅಕ್ಟೋಬರ್ 12ರಂದು ಪ್ರಾರಂಭಗೊಂಡಿತು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ 4 ದಿನಗಳ ಶ್ರೀ ಶಾರದಾ ಉತ್ಸವ ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ ಆರಂಭಗೊಂಡಿತು. ಶಾರದಾ ಮೂರ್ತಿಯ ಸೇವಾಕರ್ತರಾದ ಪ್ರಭಾತ್ ಭಟ್ ದಂಪತಿ ನೇತೃತ್ವದಲ್ಲಿ ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳರಿಂದ ಶ್ರೀ ಶಾರದಾ ಮಂಟಪದಲ್ಲಿ ಗಣಹೋಮ ಹಾಗೂ ಶ್ರೀ ಶಾರದಾ ಮೂರ್ತಿಯ ಪ್ರತಿಷ್ಠೆ ನಡೆಯಿತು. ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಭಗಿನಿ ಭಜನಾ ಮಂಡಳಿ ಮತ್ತು ಗುರಿಪಳ್ಳ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ಶಾರದಾ ಮೂರ್ತಿ ಪ್ರತಿಷ್ಠೆ ಹಾಗು ಗಣಹೋಮ ಧಾರ್ಮಿಕ ವಿಧಿಗಳಲ್ಲಿ ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಮಾಧವ ಹೊಳ್ಳ, ಕಾರ್ಯದರ್ಶಿ ಅಜೇಯ ಶೆಟ್ಟಿ, ಕೋಶಾಧಿಕಾರಿ ಶಿವಪ್ರಸಾದ್ ಸುರ್ಯ, ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ಣಾಯ, ಭರತ್ ಕುಮಾರ್, ಪರಾರಿ ವೆಂಕಟ್ರಮಣ ಹೆಬ್ಬಾರ್, ಅರುಣಕುಮಾರ್, ಸಂಜೀವ ಶೆಟ್ಟಿ ಕುಂಟಿನಿ, ಜಯಂತ ಶೆಟ್ಟಿ ಕುಂಟಿನಿ, ಪದ್ಮನಾಭ ಶೆಟ್ಟಿಗಾರ್, ವಿನಯಚಂದ್ರ, ಹುಕುಂ ರಾಮ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು. ಅಕ್ಟೇಬರ್ 13ರಂದು ಶ್ರೀ ದುರ್ಗಾಹೋಮ, ವಿವಿಧ ಭಜನಾ ಮಂಡಳಿಯಿಂದ ಭಜನೆ; ಅಕ್ಟೋಬರ್ 15ರಂದು ಅಕ್ಷರ ಅಭ್ಯಾಸ, ಸಂಜೆ ಶ್ರೀ ಶಾರದಾ ಮೂರ್ತಿಯ ವಿಸರ್ಜನೆ ನಡೆಯಲಿದೆ. ಯಾವುದೇ ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೇ ಶ್ರೀ ಶಾರದಾ ಉತ್ಸವ ಸರಳವಾಗಿ ನಡೆಯಿತು.






