ಬೆಳ್ತಂಗಡಿ: ಮುಸ್ಲಿಂ ಸಮುದಾಯದ ಅಭಿವೃದ್ಧಿ, ಸಮಾಜದ ಸಾಂಸ್ಕೃತಿಕ-ಆರ್ಥಿಕ-ಸಾಮಾಜಿಕ-ಶೈಕ್ಷಣಿಕ-ಆರೋಗ್ಯ, ಔದ್ಯೋಗಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಬಲೀಕರಣ, ನಾಡಿನ ಸರ್ವ ಜನರ ಮಧ್ಯೆ ಸಾಮರಸ್ಯ ಸೌಹಾರ್ದತೆ ಸಹಿಷ್ಣುತೆ ಸೃಷ್ಟಿಸಿ, ರಾಷ್ಟ್ರದ ಏಕತೆಗಾಗಿ ಶ್ರಮಿಸುವ ಧ್ಯೇಯದೊಂದಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದೆ.ನವೆಂಬರ್ 1ರಿಂದ 30ರತನಕ ನಡೆಯುವ ಸದಸ್ಯತ್ವ ಅಭಿಯಾನದ ಭಾಗವಾಗಿ, ಕಣಿಯೂರು ಬ್ಲಾಕ್ ವ್ಯಾಪ್ತಿಯಲ್ಲಿ ಚಾಲನೆಯನ್ನು ನೀಡಲಾಯಿತು. ಬ್ಲಾಕ್ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್ ಸಖಾಫಿ ಮೂಡಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು, SMA ಕುಪ್ಪೆಟ್ಟಿ ರೀಜನಲ್ ಹಾಗೂ SYS ಉಪ್ಪಿನಂಗಡಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಮದನಿ ಹಿರೆಬಂಡಾಡಿ ಉದ್ಘಾಟಿಸಿದರು. ಹಿರಿಯ ವಿದ್ವಾಂಸರಾದ PS ಉಸ್ತಾದ್ ತುರ್ಕಳಿಕೆ ಮೌಲಿದ್ ಪಾರಾಯಣದ ಪ್ರಾರ್ಥನೆಯ ನೇತೃತ್ವ ನೀಡಿದರು. ಪ್ರಧಾನ ಕಾರ್ಯದರ್ಶಿ ಝಾಕಿರ್ ಹುಸೈನ್ ಕಣಿಯೂರು ಸ್ವಾಗತ ಭಾಷಣ ಮಾಡಿದರು. ಸಂಘಟನಾ ಕಾರ್ಯದರ್ಶಿ ಎನ್. ಎಂ. ಶರೀಫ್ ಸಖಾಫಿ ನೆಕ್ಕಿಲ್ ಕಾರ್ಯಕ್ರಮ ನಿರೂಪಿಸಿದರು.ವೇದಿಕೆಯಲ್ಲಿ SJM ಮೂರುಗೋಳಿ ರೇಂಜ್ ಅಧ್ಯಕ್ಷರಾದ ಹಮೀದ್ ಸಅದಿ ಕಳಂಜಿಬೈಲು, SYS ಕುಪ್ಪೆಟ್ಟಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಟ್ಲಡ್ಕ, SMA ನಾಯಕರಾದ ಖಾದರ್ ಹಾಜಿ ಉಜಿರ್ಬೆಟ್ಟು, ಅಬ್ಬಾಸ್ ಬಟ್ಲಡ್ಕ, ಕೋಶಾಧಿಕಾರಿ ಇಬ್ರಾಹಿಂ NNB, ಉಪಾಧ್ಯಕ್ಷರಾದ ಯಾಕೂಬ್ ಮಾಪಾಲ್, SYS ಸರಳೀಕಟ್ಟೆ ಸೆಂಟರ್ ಅಧ್ಯಕ್ಷರಾದ G.M. ಮುಹಮ್ಮದ್ ಕುಂಞಿ ಜೋಗಿಬೆಟ್ಟು, SMA ಮೂರುಗೋಳಿ ಅಧ್ಯಕ್ಷರಾದ ಹಂಝ ಸೋಕಿಲ, ಕಾರ್ಯದರ್ಶಿ ಶರೀಫ್ ಮದನಿ ಕರ್ಪಾಡಿ, ಕಾದರ್ ಮದನಿ ಕನ್ಯಾರಕೋಡಿ, ಉಪ್ಪಿನಂಗಡಿ ಸರ್ಕಲ್ ಡೈರೆಕ್ಟರ್ ಖಲಂದರ್ ಪದ್ಮುಂಜ, ಉರುವಾಲು ಗ್ರಾಮ ಸಮಿತಿ ಅಧ್ಯಕ್ಷ ಶುಕೂರ್ ಕುಪ್ಪೆಟ್ಟಿ, ಇಲ್ಯಾಸ್ ಹಾಜಿ, ಇಳಂತಿಲ ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದೀಕ್ ಇಂಜಿನಿಯರ್, ಅಬೂಬಕರ್ ಕರಾಯ, ನಾಸಿರ್ ಸರಳೀಕಟ್ಟೆ, SMS ಇಬ್ರಾಹಿಂ ಮುಸ್ಲಿಯಾರ್, ರಫೀಕ್ ಉಜಿರ್ಬೆಟ್ಟು, ಸಲೀಂ ಜೋಗಿಬೆಟ್ಟು, ಲತೀಫ್ ಬೋವು ಮೊದಲಾದ ಅನೇಕ ನಾಯಕರು, ಸದಸ್ಯರು ಉಪಸ್ಥಿತರಿದ್ದರು.






