ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನವೆಂಬರ್ 9 ರಂದು ಪೊಲೀಸ್ ಠಾಣೆಯ ಕಟ್ಟಡದ ಶಿಲಾನ್ಯಾಸಕ್ಕೆ ಆಗಮಿಸಿದ ರಾಜ್ಯ ಸರಕಾರ ಗೃಹ ಸಚಿವ ಅರಗ ಜ್ಞಾನೇಂದ್ರ ಶಿಲಾನ್ಯಾಸ ಕಾರ್ಯಕ್ರಮ ಪೂರೈಸಿ ಸುಲ್ಕೇರಿ ಶಾಲೆಗೆ ತೆರಳುವ ಹಾದಿ ಮಧ್ಯೆ ಧರ್ಮಸ್ಥಳ ಕನ್ಯಾಡಿಯ ನಿತ್ಯಾನಂದ ನಗರದಲ್ಲಿರುವ ಶ್ರೀ ರಾಮಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಸೀತಾರಾಮರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರ ಕೋರಿಕೆಯಂತೆ ಶ್ರೀ ರಾಮಕ್ಷೇತ್ರಕ್ಕೆ ಭೇಟಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಬಳಿಕ ಕ್ಷೇತ್ರದ ಬ್ರಹ್ಮಾನಂದ ಶ್ರೀಗಳೊಂದಿಗೆ ಕೋಣೆಯೊಂದರೊಳಗೆ ಬಾಗಿಲು ಹಾಕಿ ಗುಪ್ತ ಸಮಾಲೋಚನೆ ನಡೆಸಿದ್ದು ಕುತೂಹಲ ಕೆರಳಿಸಿದೆ. ಸಚಿವ ಹಾಗೂ ಸ್ವಾಮೀಜಿಯ ಈ ರಹಸ್ಯ ಮಾತುಕತೆಯ ಸಂದರ್ಭ ಶಾಸಕ ಹರೀಶ್ ಪೂಂಜ ಮಾತ್ರ ಜೊತೆಗಿದ್ದರು. ಮಾಧ್ಯಮದವರು ಹಾಗೂ ಪೊಲೀಸ್ ಅಧಿಕಾರಿಗಳು ಮಾತ್ರವಲ್ಲ; ತಾಲೂಕಿನ ಬಿಜೆಪಿ ಕಾರ್ಯಕರ್ತರದ್ದೂ ಅಲ್ಲಿ ಬಾಗಿಲು ಕಾಯುವ ಕೆಲಸವಾಗಿತ್ತು.






