ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
Facebook
Twitter
LinkedIn
WhatsApp

ಬೆಳ್ತಂಗಡಿ: ಕಳಿಯ ಗ್ರಾಮದ ಬದಿನಡೆ ಮತ್ತು ಮಂಜಲಡ್ಕ ದೈವಗಳ ಸಾನಿಧ್ಯದಲ್ಲಿ ಡಿಸೆಂಬರ್ 21 ರಿಂದ 26 ರವರೆಗೆ ನಡೆಯಲಿರುವ ಉಳ್ಳಾಕುಲು-ಉಳ್ಳಾಲ್ತಿ, ರಕ್ತೇಶ್ವರೀ, ಮಹಿಷಂತಾಯ, ಪಂಜುರ್ಲಿ ದೈವಗಳ ಮತ್ತು  ಮಂಜಲಡ್ಕ ದೈವ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ ಹಾಗೂ ಕಲ್ಕುಡ ದೈವಗಳ ಪ್ರತಿಷ್ಠಾ ಮಹೋತ್ಸವ ಕಲಶಾಭಿಷೇಕ ಮತ್ತು ನರ್ತನ ಸೇವೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಡಿಸೆಂಬರ್ 7ರಂದು ಜರುಗಿತು.ಕಲಶಾಭಿಷೇಕ ಸಮಿತಿ ಗೌರವಾಧ್ಯಕ್ಷ ಹಾಗೂ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಘವೇಂದ್ರ ಭಾಂಗಿಣ್ಣಾಯ, ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಸುರೇಂದ್ರ ಕುಮಾರ್ ಕಳಿಯಬೀಡು, ಅಧ್ಯಕ್ಷ ಸುವರ್ಣೇಂದ್ರ ಜೈನ್ ಕಳಿಯಬೀಡು, ಪ್ರಧಾನ ಕಾರ್ಯದರ್ಶಿ ಸತ್ಯೇಂದ್ರ ಕುಮಾರ್ ಕಳಿಯಬೀಡು, ಕೋಶಾಧಿಕಾರಿ ಕೂಸಪ್ಪ ಗೌಡ, ಕಲಶಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ವಸಂತ ಮಜಲು, ಅಧ್ಯಕ್ಷ ಕೇಶವ ಬಂಗೇರ, ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ, ಕೋಶಾಧಿಕಾರಿ ಬಾಲಕೃಷ್ಣ ಗೌಡ ಬಿರ್ಮೋಟ್ಟು, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ ಗೌಡ, ನಾಳ ಶ್ರೀ ದುರ್ಗಾಪರಮೆಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಪ್ರಧಾನ ಅರ್ಚಕ ರಾಘವೇಂದ್ರ ಅಸ್ರಣ್ಣ, ಕಲಶಾಭಿಷೇಕ ಸಮಿತಿ ಮತ್ತು ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು, ಊರ ಭಕ್ತಾಧಿಗಳು ಉಪಸ್ಥಿತರಿದ್ದರು.ಜೀರ್ಣೋದ್ಧಾರ ಸಮಿತಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಸ್ವಾಗತಿಸಿದರು. ರಾಘವ ಕಾರ್ಯಕ್ರಮ ನಿರೂಪಿಸಿದರು

Latest 5

Related Posts