ಬೆಳ್ತಂಗಡಿ: ಆರೋಗ್ಯ ಶಿಬಿರಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮೊದಲ ಹಂತದಲ್ಲಿ ರೋಗ ಪತ್ತೆ ಮಾಡಲು ಅನುಕೂಲವಾಗುತ್ತದೆ ಎಂದು ನೆರಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಶಲ ಕೆ. ಅಭಿಪ್ರಾಯಪಟ್ಟರು. ಅವರು ಮಾರ್ಚ್ 20ರಂದು ಗಂಡಿಬಾಗಿಲಿನ ಸೈಂಟ್ ಥೋಮಸ್ ಚರ್ಚ್ ಸಭಾಂಗಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಗಂಡಿಬಾಗಿಲು ಸೈಂಟ್ ತೋಮಸ್ ಚರ್ಚಿನ ಧರ್ಮಗುರು ವಂದನೀಯ ಮ್ಯಾಥ್ಯೂ ವೆಟ್ಟಂತ್ತಡತ್ತಿಲ್ ಶಿಬಿರದ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮಂಗಳೂರು ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ನಿಶ್ಚಿತ್ ಶೆಟ್ಟಿ ಹಾಗೂ ಬೆಳ್ತಂಗಡಿ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಏಲಿಯಮ್ಮ ಥೋಮಸ್ ಶಿಬಿರಕ್ಕೆ ಶುಭ ಹಾರೈಸಿದರು. ಲಾಯ್ಲ ಎಸ್. ಡಿ. ಕಾನ್ವೆಂಟಿನ ಸುಪೀರಿಯರ್ ಭಗಿನಿ ಆನ್ಸ್ ಲೆಟ್, ಮಂಗಳೂರು ಪ್ರಸಾದ್ ನೇತ್ರಾಲಯದ ನೇತ್ರ ತಜ್ಞರಾದ ಡಾ| ಅವಿನಾಶ್, ಗಂಡಿಬಾಗಿಲು ಚರ್ಚಿನ ವಿವಿಧ ಸಂಘಟನೆಗಳ ಪ್ರತಿನಿಧಿಯಾಗಿ ಚಾಂಡಿ ಚೆರಂಗರಪುತ್ತನ್ಪುರ, ಗಂಡಿಬಾಗಿಲು ಸೈಂಟ್ ಥೋಮಸ್ ಚರ್ಚಿನ ಟ್ರಸ್ಟಿ ಟೈಟಸ್ ಮಾಧವತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚರ್ಚಿನ ವಿವಿಧ ಸಂಘಟನೆಗಳ ಮುಖಂಡರು, ಪಂಚಾಯತ್ ಸದಸ್ಯರು ಹಾಗೂ ಚರ್ಚಿನ ಟ್ರಸ್ಟಿಗಳು ಶಿಬಿರದ ಯಶಸ್ಸಿಗೆ ಸಹಕರಿಸಿದರು. ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ನಿರ್ದೇಶಕರಾದ ವಂದನೀಯ ಬಿನೋಯಿ. ಎ. ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಡಿಬಾಗಿಲು ಸೈಂಟ್ ಥೋಮಸ್ ಚರ್ಚಿನ ಸಂಡೇ ಸ್ಕೂಲ್ ಶಿಕ್ಷಕರಿದ ಸಿಜು ಚೇಟುತ್ತಡತ್ತಿಲ್ ಎಲ್ಲರನ್ನು ಸ್ವಾಗತಿಸಿದರು. ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ಸಂಯೋಜಕ ಸುನಿಲ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಕಾರ್ಯಕರ್ತರಾದ ಜೋನ್ಸನ್ ವಂದನಾರ್ಪಣೆಗೈದರು. ಸಂಡೇ ಸ್ಕೂಲ್ ಮಕ್ಕಳು ಪ್ರಾರ್ಥನೆ ಹಾಡಿದರು. ಈ ಶಿಬಿರದಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ, ನೇತ್ರ ಪರೀಕ್ಷೆ, ಎಲುಬು ರೋಗ ವಿಭಾಗ, ಸಾಮಾನ್ಯ ವೈದ್ಯಕೀಯ ತಪಾಸಣೆ, ವೆರಿಕೋಸ್ ವೇನ್ ಮುಂತಾದ ತಪಾಸಣೆಗಳು ನಡೆದವು. ಸುಮಾರು 100 ಮಂದಿ ಈ ಶಿಬಿರದ ಪ್ರಯೋಜನ ಪಡೆದರು. ಜ್ಯೋತಿ ಆಸ್ಪತ್ರೆ ಲಾಯಿಲ, ಪ್ರಸಾದ್ ನೇತ್ರಾಲಯ ಮಂಗಳೂರು, ಸೈಂಟ್ ಥೋಮಸ್ ಚರ್ಚ್ ಗಂಡಿಬಾಗಿಲು, ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ, ಸ್ನೇಹಕಿರಣ್ ಜಿಲ್ಲಾ ಒಕ್ಕೂಟ ಬೆಳ್ತಂಗಡಿ, ಮಹಾಸಂಘ ಗಂಡಿಬಾಗಿಲು, ಗಂಡಿಬಾಗಿಲು ಚರ್ಚಿನ ವಿವಿಧ ಸಂಘಟನೆಗಳಾದ ಕ್ರೆಡಿಟ್ ಯೂನಿಯನ್, ಸೈಂಟ್ ವಿನ್ಸೆಂಟ್ ಡಿ’ ಪೌಲ್ ಸೊಸೈಟಿ, ಸಂಡೇ ಸ್ಕೂಲ್, ಮಿಷನ್ ಲೀಗ್, ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಎಸೋಸಿಯೇಶನ್ ಹಾಗೂ ಸೀರೋ ಮಲಬಾರ್ ಯೂತ್ ಮೂವ್ ಮೆಂಟ್ ಇವುಗಳ ಸಹಯೋಗದೊಂದಿಗೆ ಆರೋಗ್ಯ ಶಿಬಿರವು ನಡೆಯಿತು.