ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ನೂತನ ಕ್ಲಬ್ ಆರಂಭಗೊಳ್ಳಲಿದೆ. ಸ್ಥಾಪಕ ಅಧ್ಯಕ್ಷರಾಗಿ ಸುಂದರ ಶೆಟ್ಟಿ, ಕಾರ್ಯದರ್ಶಿಯಾಗಿ ರವಿ ಶೆಟ್ಟಿ, ಕೋಶಾಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಾರಾವಿ ಶಾಖಾ ಪ್ರಬಂಧಕ ಸುಧೀರ್ ಎಸ್. ಪಿ. ಆಯ್ಕೆಗೊಂಡಿದ್ದಾರೆ. ಸ್ಥಾಪಕ ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರುಗಳಾಗಿ ಸಂತೋಷ್ ಕುಮಾರ್ ಹೆಗ್ಡೆ, ಸುಲ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾರಾಯಣ ಪೂಜಾರಿ, ಸುರೇಶ್ ಭಟ್, ದೀಪಕ್ ಶೆಟ್ಟಿ ಕೊಕ್ರಾಡಿ ಆಯ್ಕೆಯಾಗಿದ್ದಾರೆ. ದಯಾಕರ ರೈ ಜೊತೆ ಕಾರ್ಯದರ್ಶಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ. ಸ್ಥಾಪಕ ಸದಸ್ಯರುಗಳಾಗಿ ಪ್ರಶಾಂತ್ ಶೆಟ್ಟಿ, ಸಂದೀಪ್ ಶೆಟ್ಟಿ, ದಿನೇಶ್, ಸುರೇಶ್ ಶೆಟ್ಟಿ, ಅಲೋಶಿಯಸ್ ಲೋಬೊ, ಪ್ರಶಾಂತ್ ಪೂಜಾರಿ, ನವೀನ್ ಶೆಟ್ಟಿ, ರವಿ ಪೂಜಾರಿ, ಜಗದೀಶ್ ಹೆಗ್ಡೆ ಕೊಕ್ರಾಡಿ, ವಿಠಲ ಶೆಟ್ಟಿ, ಪ್ರದೀಪ್ ಕುಮಾರ್, ರಾಜೇಶ್ ಶೆಟ್ಟಿ ಇವರು ಸೇರ್ಪಡೆಯಾಗಿದ್ದಾರೆ. ಕ್ಲಬ್ಬಿನ ವಿಸ್ತರಣಾ ಛೇರ್ಮನ್ ಆಗಿ ವಸಂತ್ ಶೆಟ್ಟಿ ಶ್ರದ್ಧಾ, ಗೈಡಿಂಗ್ ಲಯನ್ಸ್ ಆಗಿ ಪ್ರಕಾಶ್ ಶೆಟ್ಟಿ ನೊಚ್ಚ, ನಿತ್ಯಾನಂದ ನಾವರ ಹಾಗೂ ರಾಜು ಶೆಟ್ಟಿ ಬೆಂಗೇತ್ಯಾರು ಸೇವೆಯನ್ನು ನೀಡಲಿದ್ದಾರೆ. ಕ್ಲಬ್ಬಿನ ಉದ್ಘಾಟನೆಯು ಇದೇ ಏಪ್ರಿಲ್ 5ರಂದು ಜರಗಲಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲರ ಪ್ರಕಟಣೆ ತಿಳಿಸಿದೆ.