Warning: Constant WP_AUTO_UPDATE_CORE already defined in /home/u584898912/domains/jaikannadamma.in/public_html/wp-config.php on line 100
ನಾಟ್ಯಗುರು ಕಮಲಾಕ್ಷ ಆಚಾರ್‌ಗೆ ಅಭಿನಂದನೆ - Jai Kannadamma

ನಾಟ್ಯಗುರು ಕಮಲಾಕ್ಷ ಆಚಾರ್‌ಗೆ ಅಭಿನಂದನೆ

ನಾಟ್ಯಗುರು ಕಮಲಾಕ್ಷ ಆಚಾರ್‌ಗೆ ಅಭಿನಂದನೆ
Facebook
Twitter
LinkedIn
WhatsApp

ಬೆಳ್ತಂಗಡಿ: ದೇಶದಲ್ಲಿ ದಕ್ಷಿಣ ಭಾರತವನ್ನು ಪರಿಗಣಿಸಿದರೆ ಭರತನಾಟ್ಯಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ. ರಾಜಮಹಾರಾಜರ ಕಾಲದಿಂದಲೂ ನೃತ್ಯವನ್ನು ಸಮರ್ಥವಾಗಿ ಅಧ್ಯಯನಶೀಲತೆಗೆ ಒಳಪಡಿಸಿಕೊಂಡು ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯಲ್ಲಿರುವ ನೂರಕ್ಕೂ ಅಧಿಕ ಭರತನಾಟ್ಯ ಗುರುಗಳಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಗುರುವಾಗಿ ಭರತನಾಟ್ಯವನ್ನು ಸಮರ್ಥವಾಗಿ ಆರಾಧಿಸುತ್ತಿರುವ ಕಮಲಾಕ್ಷ ಆಚಾರ್ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಾಗಿದ್ದು, ಶೀಘ್ರವೇ ಈ ಪ್ರಶಸ್ತಿಯೂ ಅವರ ಮುಡಿಗೇರಿಲಿ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಆಶಿಸಿದರು.ತಾಲೂಕಿನ ಮೊದಲ ಶಾಸ್ತ್ರೀಯ ನೃತ್ಯ ಗುರು ಕಮಲಾಕ್ಷ ಆಚಾರ್ ಅವರಿಗೆ ಸರಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ 2020-21ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತವಾದ ಹಿನ್ನೆಲೆ ಅವರಿಗೆ ಮಾರ್ಚ್ 27ರಂದು ಉಜಿರೆ ಶಾರದಾ ಮಂಟಪದಲ್ಲಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಕಳೆದ ಎರಡು ವರ್ಷಗಳ ಸಾಂಕ್ರಾಮಿಕ ರೋಗದ ಕಾಲಘಟ್ಟದಲ್ಲಿ ಎಲ್ಲವೂ ನಿರಾಶವಾಗಿ ಕಾಣುವ ಸಂದರ್ಭದಲ್ಲಿ ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಮಕ್ಕಳು ನಾನಾ ಪ್ರಕಾರಗಳಲ್ಲಿ ವಿದ್ವತ್ ಪರೀಕ್ಷೆ ಎದುರಿಸಿದ್ದು, ಭರತನಾಟ್ಯದಲ್ಲಿ ರಾಜ್ಯದಲ್ಲಿ ಏಳು ಸಾವಿರ ಮಂದಿ ವಿದ್ವತ್ ಪರೋಕ್ಷೆಗೆ ಹಾಜರಾದರೆ; ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರ ಮಂದಿ ವಿದ್ವತ್ ಪರೀಕ್ಷೆ ಬರೆದಿರುವುದು ಸಂತೋಷದ ಹಾಗೂ ಹೆಮ್ಮೆಯ ವಿಚಾರ ಎಂದು ಡಾl ಆಳ್ವ ಶ್ಲಾಘಿಸಿದರು.ಅಭಿನಂದನಾ ಕಾರ್ಯಕ್ರಮದಲ್ಲಿ ವಿಶ್ರಾಂತ ಉಪನ್ಯಾಸಕ ಮಧುಕರ ಮಲ್ಯ ಅಭಿನಂದನಾ ಭಾಷಣ ಮಾಡಿ, ಗುರು-ಶಿಷ್ಯರ ಸೇವೆಯನ್ನು ಸ್ಮರಿಸುವ ಕಾಲಘಟ್ಟದಲ್ಲಿ ನಾಡಿನುದ್ದಕ್ಕೂ ಸಾವಿರಾರು ಶಿಷ್ಯವರ್ಗವನ್ನು ಗಳಿಸಿರುವ ಕೀರ್ತಿ ಕಮಲಾಕ್ಷ ಆಚಾರ್ಯ ಅವರದು. ಅವರಿಗೆ ಸಂದಿರುವ ಪ್ರಶಸ್ತಿಗಳು ಅವರ ಕರ್ತವ್ಯದ ಕಲಾಸೇವೆಯಲ್ಲಿರುವ ನಿಷ್ಠೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬಣ್ಣಿಸಿದರು.ಮುಖ್ಯ ಅತಿಥಿ ಶಾಸಕ ಹರೀಶ್ ಪೂಂಜ ಮಾತನಾಡಿ, ಬೆಳ್ತಂಗಡಿ ತಾಲೂಕಿನಂತಹ ಗ್ರಾಮೀಣ ಭಾಗದಲ್ಲಿ ಸುಮಾರು 47ವರ್ಷಗಳ ಕಾಲ ರಾಷ್ಟ್ರೋನ್ನತ ಕಲೆಗೋಸ್ಕರ ಬದುಕಿ ಸಮಾಜಕ್ಕೆ ಸ್ವಾರ್ಥರಹಿತವಾಗಿ ಸೇವೆ ನೀಡಿದವರು ಕಲಾತಪಸ್ವಿ ಕಮಲಾಕ್ಷ ಆಚಾರ್ಯರು ಎಂದು ಬಣ್ಣಿಸಿದರು.ಶಿಷ್ಯೆಯರಾದ ಡಾ| ಕೃಪಾ ಫಡ್ಕೆ, ಡಾ| ರಜತಾ ಪಿ.ಶೆಟ್ಟಿ ಗುರುನಮನ ಸಲ್ಲಿಸಿದರು. ಡಾ| ಎಂ. ಮೋಹನ್ ಆಳ್ವ, ಶಾಸಕ ಹರೀಶ್ ಪೂಂಜ ಸಹಿತ ಗಣ್ಯರು ಶಾಸ್ತ್ರೀಯ ನೃತ್ಯ ಗುರು ಕಮಲಾಕ್ಷ ಆಚಾರ್ ಅವರನ್ನು ಅಭಿನಂದಿಸಿದರು. ವಿಧುಷಿ ಕೃಪಾಫಡ್ಕೆ ನಿರ್ದೇಶನದಲ್ಲಿ ಮೈಸೂರಿನ ನೃತ್ಯಗಿರಿ ತಂಡದವರಿಂದ ಭರತಾಂಜಲಿ ನೃತ್ಯ ಪ್ರದರ್ಶನ ನಡೆಯಿತು.ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಉಪಾಧ್ಯಕ್ಷ ಚಂದ್ರೇಶೇಖರ ಶೆಟ್ಟಿ, ಲಯನ್ ಹೇಮಂತ ರಾವ್ ಯರ್ಡೂರು, ರಂಜನ್ ರಾವ್ ಉಪಸ್ಥಿತರಿದ್ದರು.ಅಭಿನಂದನಾ ಸಮಿತಿ ಅಧ್ಯಕ್ಷ ವಿಠಲ ಶೆಟ್ಟಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಯದುಪತಿ ಗೌಡ ಗಣ್ಯರ ಸಂದೇಶ ವಾಚಿಸಿದರು. ಅಭಿನಂದನಾ ಸಮಿತಿ ಉಪಾಧ್ಯಕ್ಷ ಗಣಪತಿ ಭಟ್ ಕುಳಮರ್ವ ಕಾರ್ಯಕ್ರಮ ನಿರೂಪಿಸಿದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ್ ಶೆಟ್ಟಿ ಕಾರ್ಯಕ್ರಮದ ಕೇಂದ್ರಬಿಂದು ನೃತ್ಯಗುರು ಕಮಲಾಕ್ಷ ಆಚಾರ್ಯ ಅವರನ್ನು ಪರಿಚಯಿಸಿದರು. ಕಾರ್ಯದರ್ಶಿ ಪುರುಷೋತ್ತಮ ಕೆ. ಎ., ವಂದಿಸಿದರು.

Latest 5

Related Posts