ಶ್ರೀ ರಾಮಕ್ಷೇತ್ರದಲ್ಲಿ ಭಜನಾ ಸಪ್ತಾಹ ಮತ್ತು ಜಾತ್ರೋತ್ಸವಕ್ಕೆ ಚಾಲನೆ

ಶ್ರೀ ರಾಮಕ್ಷೇತ್ರದಲ್ಲಿ ಭಜನಾ ಸಪ್ತಾಹ ಮತ್ತು ಜಾತ್ರೋತ್ಸವಕ್ಕೆ ಚಾಲನೆ
Facebook
Twitter
LinkedIn
WhatsApp

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿತ್ಯಾನಂದನಗರ ಶ್ರೀ ರಾಮಕ್ಷೇತ್ರದಲ್ಲಿ 62ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ ಹಾಗೂ ಶ್ರೀ ರಾಮಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವಕ್ಕೆ ಎಪ್ರಿಲ್ 3ರಂದು ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕರ್ನಾಟಕ ಸರಕಾರದ ಪಂಚಾಯತ್‌ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ನಂದಾ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಬಿಲ್ಲವರ ಮಹಾ ಮಂಡಲ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯ ಮೋನಪ್ಪ ಗೌಡ, ಉಪಾಧ್ಯಕ್ಷ ಶ್ರೀನಿವಾಸ ರಾವ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ರಮೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಧನಲಕ್ಷ್ಮಿ ಜನಾರ್ದನ್, ಶೈಲೇಶ್ ಕುಮಾರ್ ಕುರ್ತೋಡಿ ಹಾಗೂ ತುಂಗಪ್ಪ ಬಂಗೇರ, ಶ್ರೀರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ತಾಲೂಕು ಸಂಚಾಲಕ ಜಯಂತ್ ಕೋಟ್ಯಾನ್, ತಾಲೂಕು ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಪ್ರಧಾನ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ನಿಡ್ಗಲ್, ಕಾರ್ಯದರ್ಶಿ ಚಿದಾನಂದ ಇಡ್ಯಾ, ವಾಣಿಜ್ಯ ತೆರಿಗೆ ಆಯುಕ್ತ ರಾಜು ನಾಯ್ಕ್, ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ, ಪ್ರಮುಖರಾದ ವಕೀಲ ಭಗೀರಥ ಜಿ, ರಾಜೇಶ್ ಮೂಡುಕೋಡಿ, ರತ್ನಾಕರ ಬುಣ್ಣಾನ್, ಪ್ರಶಾಂತ್ ಪಾರೆಂಕಿ, ವಕೀಲ ಅನಿಲ್ ಯು., ಬೆಳ್ತಂಗಡಿ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ವಕೀಲ ಕೇಶವ ಗೌಡ ಪಿ., ಟ್ರಸ್ಟಿ ತುಕಾರಾಮ್ ಸಾಲಿಯಾನ್, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕರುಗಳಾದ ವಸಂತ ಪೂಜಾರಿ ಪುದುವೆಟ್ಟು, ಪುರುಷೋತ್ತಮ ಧರ್ಮಸ್ಥಳ, ಗುರುಪ್ರಸಾದ ಕೋಟ್ಯಾನ್ ಉಜಿರೆ, ಉಪನ್ಯಾಸಕ ಸ್ಮಿತೇಶ್ ಬಾರ್ಯ, ಕೃಷ್ಣಪ್ಪ ಗುಡಿಗಾರ, ಪ್ರೀತಮ್ ಡಿ., ಶಶಿಧರ್ ನಿಡ್ಗಲ್, ಸೀತಾರಾಮ ಬಿ. ಎಸ್. ಬೆಳಾಲು, ವಿವಿಧ ಭಜನಾ ಮಂಡಳಿಯ ಸದಸ್ಯರು, ರಾಮಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು. ಎಪ್ರಿಲ್ 10ರವರೆಗೆ 7 ದಿನಗಳ ಕಾಲ ನಿರಂತರವಾಗಿ ಅಹೋರಾತ್ರಿ ಶ್ರೀ ರಾಮನಾಮ ತಾರಕಮಂತ್ರ ಪಠಣ, ಉತ್ಸವ, ರಥೊತ್ಸವ ಹಾಗೂ ಬ್ರಹ್ಮ ರಥೋತ್ಸವ ನಡೆಯಲಿದೆ.

Latest 5

Related Posts