ನಾಲ್ಕು ವರ್ಷದಲ್ಲಿ ಮೂರು ಸಾವಿರ ಹಕ್ಕುಪತ್ರ ವಿತರಣೆ-ಪೂಂಜ

ನಾಲ್ಕು ವರ್ಷದಲ್ಲಿ ಮೂರು ಸಾವಿರ ಹಕ್ಕುಪತ್ರ ವಿತರಣೆ-ಪೂಂಜ
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಹಕ್ಕುಪತ್ರವನ್ನು‌ ನಿರಂತರವಾಗಿ ವಿತರಿಸುವ ಮೂಲಕ ಉತ್ತಮ ವ್ಯವಸ್ಥೆಗಳನ್ನು ಜನರಿಗೆ ಮಾಡುವ ದೃಷ್ಟಿಯಿಂದಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 4 ವರ್ಷಗಳ ಅವಧಿಯಲ್ಲಿ ಸುಮಾರು 3 ಸಾವಿರ ಹಕ್ಕುಪತ್ರಗಳನ್ನು ವಿತರಿಸುವ ಕೆಲಸ ಶಾಸಕನಾಗಿಮಾಡಿದ್ದೇನೆ ಎಂದು  ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಜೂನ್ 20ರಂದು  ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಿಸಿ ಮಾತನಾಡುತ್ತಿದ್ದರು. ಸರಕಾರದ ಜನಪರ ಯೋಜನೆಗಳು ತಾಲೂಕಿನ ಕಟ್ಟ ಕಡೆಯ ವ್ಯಕ್ತಿಗೂ ತಲುಪ  ಬೇಕು ಎಂಬ ನಿಟ್ಟಿನಲ್ಲಿ ತಾಲೂಕಿನ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಹಕಾರದ ಮೂಲಕ ಜನರಿಗೆ ಉತ್ತಮ  ರೀತಿಯಲ್ಲಿ ತಲುಪುತ್ತಿದೆ. .ಪ್ರಧಾನಿ ನರೇಂದ್ರ ಮೋದಿ ಸರಕಾರದ ಉಜ್ವಲ ಗ್ಯಾಸ್ ಯೋಜನೆಯಿಂದಾಗಿ ತಾಲೂಕಿನ ಸುಮಾರು 18 ಸಾವಿರ ಮನೆಗಳಿಗೆ ಗ್ಯಾಸ್ ವಿತರಿಸುವಂತಹ ವ್ಯವಸ್ಥೆ ಆಗಿದೆ. ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ   ಕೃಷಿಕರಿಗೆ 6 ಸಾವಿರ ರೂಪಾಯಿಂತೆ  ತಾಲೂಕಿನ    70% ಕೃಷಿಕರ  ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುವ ಮೂಲಕ ಉತ್ತಮ ರೀತಿಯಲ್ಲಿ ಅನುಷ್ಟಾನ ಆಗುತ್ತಿದೆ. ಈ ರೀತಿಯ ಸರಕಾರದ ಯೋಜನೆಗಳು ನಮ್ಮ ತಾಲೂಕಿನ ಜನರಿಗೆ ಸಮರ್ಪಕವಾಗಿ ತಲುಪಬೇಕು ಎಂಬ ನಿಟ್ಟಿನಲ್ಲಿ ಅದಕ್ಕೆ ಬೇಕಾದಂತಹ ಎಲ್ಲ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ .  ತಾಲೂಕಿನಾದ್ಯಂತ ಸರ್ವಋತು ರಸ್ತೆಗಳಾಗಬೇಕು ಎಂಬ ನಿಟ್ಟಿನಲ್ಲಿ ಅಗಲದ ರಸ್ತೆ ನಿರ್ಮಿಸಿ ಹಳ್ಳಿಹಳ್ಳಿಗಳನ್ನು ಸಂಪರ್ಕಿಸುವ ಕೆಲಸ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಅದಲ್ಲದೇ ಕಿಂಡಿ ಅಣೆಕಟ್ಟುಗಳನ್ನು ರಚಿಸಿ ಭೂಮಿಯ ಅಂತರ್ಜಲ  ಹೆಚ್ಚಿಸುವ ಕಾರ್ಯಗಳೂ ನಡೆಯುತ್ತಿದೆ. ವಿದ್ಯುತ್ ವ್ಯವಸ್ಥೆಗಾಗಿ  ತಾಲೂಕಿನ ವಿವಿಧ ಕಡೆಗಳಲ್ಲಿ ಸುಮಾರು 440 ಟ್ರಾನ್ಸ್ ಫಾರ್ಮರ್ ಅಳವಡಿಸಲಾಗುತ್ತಿದೆ.  ತಾಲೂಕಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲಿ ತಾಲೂಕಿನ ಎಲ್ಲ ಕೆಲಸಗಳು ಹಂತಹಂತವಾಗಿ ನಡೆಯುತ್ತಿವೆ ಎಂದರು. ಕಾರ್ಯಕ್ರಮದಲ್ಲಿಬೆಳ್ತಂಗಡಿ ಪಟ್ಟಣ ಪಂಚಾಯಿತ್ ಅಧ್ಯಕ್ಷೆ ರಜನಿ ಕುಡ್ವ, ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ ಗೌಡ, ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ್, ನಿಡ್ಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಹೆಬ್ಬಾರ್, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷಶ್ರೀಧರ್, ಶಿರ್ಲಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ ಗೌಡ,ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ ಜೆ. ಗೌಡ, ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ  ಕೆ. ವಿ. ಪ್ರಸಾದ್, ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಾಕ್ಷಿ, ಬಳಂಜ ಗ್ರಾಮ .ಪಂಚಾಯತ್ ಅಧ್ಯಕ್ಷ ಹೇಮಂತ್, ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ, ಉಪತಹಸೀಲ್ದಾರ್ ದಯಾನಂದ ಹೆಗ್ಡೆ, 94ಸಿ ವಿಷಯ ನಿರ್ವಾಹಕ ಶಂಕರ್, ಗ್ರಾಮಕರಣಿಕರಾದ ಸತೀಶ್ ಪಿಂಟೋ, ಪರಮೇಶ್ ಟಿ. ಉಪಸ್ಥಿತರಿದ್ದರು. 94ಸಿ ವಿಷಯ ನಿರ್ವಾಹಕಿ ಹೇಮಾ ಕೆ. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.ಬೆಳ್ತಂಗಡಿ ತಾಲೂಕಿನ ಮೂರು ಹೋಬಳಿಯ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಿಸಲಾಯಿತು. ಬೆಳ್ತಂಗಡಿ‌ ಹೋಬಳಿಯಲ್ಲಿ 4 ಮಂದಿಗೆ   94ಸಿಸಿ,  22 ಮಂದಿಗೆ 94ಸಿ, ಕೊಕ್ಕಡ ಹೋಬಳಿಯ 40 ಮಂದಿಗೆ ಹಾಗೂ ವೇಣೂರು ಹೋಬಳಿಯ 44 ಮಂದಿಗೆ 94 ಸಿ ವಿತರಿಸಲಾಯಿತು.

Latest 5

Related Posts