ಜೀತಪದ್ಧತಿ ವಿರೋಧಿಸಿ ಜು. 1ರಿಂದ ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಮುಷ್ಕರ

ಜೀತಪದ್ಧತಿ ವಿರೋಧಿಸಿ ಜು. 1ರಿಂದ ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಮುಷ್ಕರ
Facebook
Twitter
LinkedIn
WhatsApp

ಬೆಳ್ತಂಗಡಿ: ಕರ್ನಾಟಕ ರಾಜ್ಯದ ಎಲ್ಲ 314 ನಗರ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ ಹಾಗೂ ನಗರಸಭೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಜೀತ ಮಾಡುತ್ತಿರುವ ತ್ಯಾಜ್ಯ ಸಹಾಯಕರು, ಯೂಜಿಡಿ ನೌಕರರು, ಕಸ ಸಾಗಾಟ ವಾಹನ ಚಾಲಕರು, ವಾಟರ್‌ಮೆನ್, ಡಾಟಾ ಎಂಟ್ರಿ ಅಪರೇಟರ್ಸ್‌ರನ್ನು ಹೊರಗುತ್ತಿಗೆ ಮತ್ತು ಗುತ್ತಿಗೆ ಪದ್ಧತಿ ಬದಲಾಗಿ ನೇರ ವೇತನಕ್ಕೆ ಒಳಪಡಿಸಿ, ಇತರ ಸರಕಾರಿ ನೌಕರರಂತೆ ಜೀತ ಮಾಡುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೂ ಸರಕಾರದ ಸಕಲ ಸೌಲಭ್ಯ ಒದಗಿಸುವಂತೆ ಆಗ್ರಹಿಸಲು ಹಾಗೂ ಪೌರ ಕಾರ್ಮಿಕರ ನೇಮಕಾತಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಸಂಘ ಜುಲೈ 1ರಿಂದ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಪರಿಣಾಮ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಮೇಲೂ ಆಗಲಿದೆ. ಇಲ್ಲೂ ಜೀತ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರಿತ ಹತ್ತಾರು ನೌಕರರು ಕೆಲಸ ಸ್ಥಗಿತಗೊಳಿಸಿ ಜುಲೈ 1ರಿಂದ ಮುಷ್ಕರದಲ್ಲಿ ಭಾಗವಹಿಸಲಿದ್ದು; ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯೊಂದಿಗೆ ಸಕಾಲದಲ್ಲಿ ಕಸ ವಿಲೇವಾರಿಯಾಗದೇ ದುರ್ನಾತ ಬೀರುವ ಸಾಧ್ಯತೆ ಇದೆ. ಸರಕಾರ ಎಚ್ಚೆತ್ತು ಈ ಜೀತದಾಳುಗಳ ಆರ್ತನಾದ ಆಲಿಸಿ, ಪರಿಹಾರ ನೀಡಬೇಕಾಗಿದೆ.

Latest 5

Related Posts