ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ’

ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ’
Facebook
Twitter
LinkedIn
WhatsApp

ಬೆಳ್ತಂಗಡಿ: ಸರಕಾರ ಜ್ಯಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020, ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳನ್ನು ಕಲ್ಪಿಸುವ ಪ್ರಯತ್ನವಾಗಿದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್.  ಹೇಳಿದರು.ಅವರು ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಸಸ್ಯಶಾಸ್ತ್ರ ಬೋಧಕರ ಸಂಘ ಮತ್ತು ‘ವನಶ್ರೀ’ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಜರಗಿದ ಒಂದು ದಿನದ ಪಠ್ಯಕ್ರಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನೂತನ ಶಿಕ್ಷಣ ನೀತಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅವರ ಕುತೂಹಲ, ಉತ್ಸಾಹ ಹಾಗೂ ಸೃಜನಶೀಲತೆಗಳಿಗೆ ಪೂರಕ ಹಾಗೂ ಅನ್ವಯಿಕವೂ ಆದ ಕಲಿಕಾ ಕ್ರಮವನ್ನು ಪಠ್ಯದಲ್ಲಿ ಅಳವಡಿಸಲು ಮಾರ್ಗಸೂಚಿ ನೀಡಿದೆ ಎಂದರು.ಇದೇ ಸಂದರ್ಭದಲ್ಲಿ ಭ(ಬ)ತ್ತ  ದೋತ್ಸಾಹ ಯೋಜನೆಗೆ ಚಾಲನೆ ನೀಡಿದ ಅವರು ಸಾಂಪ್ರದಾಯಿಕ ಕೃಷಿ ಪದ್ಧತಿ ಹಾಗೂ ಪರಂಪರೆ ನಿಧಾನವಾಗಿ ನೇಪಥ್ಯ ಕ್ಕೆ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಭತ್ತ ಬೆಳೆಯುವ ಹಾಗೂ ಅದಕ್ಕೆ ಪೂರಕವಾದ ಜನಪದ ಸಂಸ್ಕೃತಿಯನ್ನು ಸಂರಕ್ಷಿಸುವ ಪ್ರಯತ್ನವನ್ನು ಶ್ಲಾಘಿಸಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರು ಗಣಪತಿ ಫಸ್ಟ್ ಗ್ರೇಡ್ ಕಾಲೇಜು ಪ್ರಾಚಾರ್ಯ ಡಾ. ಜಯಕರ ಭಂಡಾರಿ ಮಾತನಾಡಿ, ಪಠ್ಯಕ್ರಮ ಬದಲಾವಣೆಯ ಪ್ರಸ್ತುತತೆ ಮತ್ತು ಅಗತ್ಯತೆಗಳನ್ನು ವಿವರಿಸಿದರು.                  ಸರ್ವರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ  ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ವನಶ್ರೀ ಸಂಘಟನೆಯ ಅಧ್ಯಕ್ಷ ರಾದ  ಡಾ. ಕುಮಾರ ಹೆಗ್ಡೆ ಬಿ. ಎ. ಅವರು ಕಾರ್ಯಾಗಾರದ ಆಶಯಗಳನ್ನು ಉಲ್ಲೇಖಿಸಿ ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸಮಾಜದ ಬೆಳವಣಿಗೆ ಯಲ್ಲಿ ಪಠ್ಯಕ್ರಮದ ಬದಲಾವಣೆಯ ಮಹತ್ವವನ್ನು ವಿವರಿಸಿದರು. ಇತ್ತೀಚೆಗೆ ನಿಧನರಾದ ಖ್ಯಾತ ಸಸ್ಯಶಾಸ್ತ್ರಜ್ಞರಾದ ಡಾ. ಗೋಪಾಲಕೃಷ್ಣ ಭಟ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅವರ ಸಾಧನೆಗಳನ್ನು ಸ್ಮರಿಸಿ ನುಡಿ ನಮನ ಸಲ್ಲಿಸಲಾಯಿತು.ಪ್ರಾಂಶುಪಾಲ ಡಾ. ಉದಯ ಚಂದ್ರ ಪಿ. ಎನ್. ಅಧ್ಯಕ್ಷತೆ ವಹಿಸಿದ್ದ ಕಾರ್ಯಾಗಾರದಲ್ಲಿ ಕಾರ್ಯಕ್ರಮ ಸಂಯೋಜಕ , ಪ್ರಾಧ್ಯಾಪಕ ಡಾ. ಗಣೇಶ್ ಶೆಂಡೈ ನಿರೂಪಿಸಿ, ವನಶ್ರೀ ಸಂಘಟನೆಯ  ಕಾರ್ಯದರ್ಶಿ  ಡಾ. ವಿನಾಯಕ  ಕೆ. ಎಸ್. ವಂದಿಸಿದರು.

Latest 5

Related Posts