ಬೆಳ್ತಂಗಡಿ: 18 KAR BN ಎನ್‌ಸಿಸಿ ವಿಭಾಗದ 2022-23ನೇ ಶೈಕ್ಷಣಿಕ ವರ್ಷದ ಮೊದಲ ವಾರ್ಷಿಕ ತರಬೇತಿ ಶಿಬಿರವು ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಮುಕ್ತಾಯಗೊಂಡಿತು2022ರ ಜೂನ್ 23ರಿಂದ ಹತ್ತು ದಿನಗಳ ಕಾಲ ಈ ಶಿಬಿರವು ನಡೆಯಿತು. ಆಡಳಿತ ಅಧಿಕಾರಿ 18 KAR BN ಎನ್‌ಸಿಸಿ ಕರ್ನಲ್ ಅಮಿತಾಬ್ ಸಿಂಗ್, 18 KAR BN ಎನ್‌ಸಿಸಿ ರಾಜು ಗುರುಂಗ್ ಎಸ್. ಎಂ. ಉಪಸ್ಥಿತರಿದ್ದರುಈ ವಾರ್ಷಿಕ ತರಬೇತಿ ಶಿಬಿರವನ್ನು ನಡೆಸಲು ಅನುಮತಿಸಿದ ಸೇಕ್ರೆಡ್ ಹಾರ್ಟ್ ಸಂಸ್ಥೆಯ ಸಂಚಾಲಕರಾದ ವಂದನೀಯ ಬಾಸಿಲ್ ವಾಸ್, ಸಹಕರಿಸಿದ ಸಿಬ್ಬಂದಿವರ್ಗ, ವರದಿಗಾರರಿಗೆ ಹಾಗೂ ತೋರಿದ ಉತ್ತಮ ನಿರ್ವಹಣೆಗೆ ಎಲ್ಲರಿಗೂ ಸಮಾರೋಪ ಸಮಾರಂಭದಲ್ಲಿ,ಕಮಾಂಡಿಂಗ್ ಆಫೀಸರ್ ಕರ್ನಲ್ ನಿತಿನ್ ಆರ್. ಬಿಡೆ ಇವರು ಧನ್ಯವಾದ ಅರ್ಪಿಸಿದರು. ಸಂಸ್ಥೆಯಲ್ಲಿ ಶಿಬಿರದ ರೂಪುರೇಷೆಯನ್ನು ಯೋಜಿಸಿದ ಸೇಕ್ರೆಡ್ ಹಾರ್ಟ್ ಕಾಲೇಜಿನ ಲೆಫ್ಟಿನೆಂಟ್ ಅಲ್ವಿನ್ ಕೆ. ಜಿ. ಅವರನ್ನು ಶ್ಲಾಘಿಸಿದರು. ಲೆಫ್ಟಿನೆಂಟ್ ಅಲ್ವಿನ್ ಕೆ. ಜಿ. ಎಎನ್‌ಒ ರವರು ಶಿಬಿರದ ವರದಿಯನ್ನು ಮಂಡಿಸಿದರು. ಸಮಾರಂಭದಲ್ಲಿ ಪದಕ ವಿಜೇತರನ್ನು ಸಮ್ಮಾನಿಸಲಾಯಿತು. ಶಿಬಿರದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ಪಟ್ಟಿಯನ್ನು ಎನ್‌ಸಿಸಿ ಅಧಿಕಾರಿ ಸಂಜಿತ್ ಕುಮಾರ್ ವಾಚಿಸಿದರು. ಲೆಫ್ಟಿನೆಂಟ್ ಶುಭಾರಾಣಿ ಪಿ. ಎಸ್. ಸಮಾರಂಭದ ಅತಿಥಿಯಾಗಿದ್ದರು.ಎನ್‌ಸಿಸಿ ಅಧಿಕಾರಿ ನಿರಂಜನ್ ಜೈನ್ ಸ್ವಾಗತಿಸಿದರು, ಎನ್‌ಸಿಸಿ ಅಧಿಕಾರಿ ಜಾರ್ಜ್ ಎ. ಎಂ. ಧನ್ಯವಾದ ಸಮರ್ಪಿಸಿದರು. ಶಿಬಿರದಲ್ಲಿ ಐದು ಎನ್‌ಸಿಸಿ ಅಧಿಕಾರಿಗಳು ಸೇರಿದಂತೆ ಒಟ್ಟು 550 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.






