ಬಹುಜನ ಚಳವಳಿ ನಾಯಕ ಪಿ. ಡೀಕಯ್ಯ ನಿಧನ

ಬಹುಜನ ಚಳವಳಿ ನಾಯಕ ಪಿ. ಡೀಕಯ್ಯ ನಿಧನ
Facebook
Twitter
LinkedIn
WhatsApp

ಬೆಳ್ತಂಗಡಿ: ಮೆದುಳಿನ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದ ಬಹುಜನ ಚಳುವಳಿಯ ಹಿರಿಯ ನಾಯಕ, ಅಂಬೇಡ್ಕರ್ ವಾದಿ ಪಿ. ಡೀಕಯ್ಯ(63) ನವರು ಜುಲೈ 9ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಜನ ಚಳುವಳಿಯನ್ನು ಕಟ್ಟಿ ಬೆಳೆಸುವುದರಲ್ಲಿ ಡೀಕಯ್ಯ ಅವರ ಪಾತ್ರ ಅತ್ಯಂತ ಹಿರಿದು. ಜಿಲ್ಲೆಯ ಗ್ರಾಮ ಗ್ರಾಮಗಳಲ್ಲಿ ಸಂಚರಿಸಿ ಚಳವಳಿಯನ್ನು ಕಟ್ಟಿದವರು  ಪಿ.ಡೀಕಯ್ಯನವರು.  ದೇಶದ ಇತಿಹಾಸದ ಜೊತೆಗೆ ತುಳುನಾಡಿನ ಇತಿಹಾಸವನ್ನೂ ಅರೆದು ಕುಡಿದಿದ್ದರು. ತುಳುನಾಡಿನಲ್ಲಿ ತಮ್ಮದೇ ಶೈಲಿಯಲ್ಲಿ ಬಹುಜನ ಚಳವಳಿಯನ್ನು ಕಟ್ಟಿದವರು. ಅವರು ಸಾಕಷ್ಟು ಯುವ ನಾಯಕರನ್ನು ಸೃಷ್ಟಿಸಿದ್ದರು.ಕಾನನಕಟದರ ಇತಿಹಾಸದ ಕುರಿತು ಅಧ್ಯಯನ ಮಾಡಿ ಪುಸ್ತಕ ಬರೆದಿದ್ದ ಡೀಕಯ್ಯರು ಅಪ್ರತಿಮ ಬರಹಗಾರರು ಕೂಡ ಆಗಿದ್ದರು. ಅವರ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಮನುವಾದದ ಕಡು ವಿರೋಧಿಯಾಗಿದ್ದ ಡೀಕಯ್ಯರು, ಅಸ್ಪೃಶ್ಯತೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಬಿಎಸ್‌ಎನ್‌ಎಲ್‌ನ ಉದ್ಯೋಗಿಯಾಗಿ ನಿವೃತ್ತರಾಗಿದ್ದರು. ತುಳುನಾಡ ಮನ್ಸ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸಂಘಟನೆಯನ್ನು ಕಟ್ಟಿದ್ದರು.ಅವರು ಪತ್ನಿ ಹಿರಿಯ ಸಾಹಿತಿ ಅತ್ರಾಡಿ ಅಮೃತಾಶೆಟ್ಟಿ, ಕುಟುಂಬ ವರ್ಗದವರು ಹಾಗೂ ಅಪಾರ ಬೆಂಬಲಿಗರನ್ನು ಅಗಲಿದ್ದಾರೆಸಾವಿನಲ್ಲೂ ಸಾರ್ಥಕತೆ:  ಮೆದುಳಿನ ರಕ್ತ ಸ್ರಾವದಿಂದ ಡೀಕಯ್ಯ ಅವರು ಮೃತಪಟ್ಟಿದ್ದು ಕುಟುಂಬಸ್ಥರು ಅವರ  ಅಂಗಾಂಗಗಳನ್ನು ದಾನ ಮಾಡಿ ಹಲವರ ಬದುಕಿಗೆ ದಾರಿ ತೋರಿದ್ದಾರೆ. ಅವರ ಅಂಗಾಂಗಗಳ  ದಾನದ ಪ್ರಕ್ರಿಯೆಗಳು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಡೆಯಿತು.

Latest 5

Related Posts