ಬೆಳ್ತಂಗಡಿ ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಮಹಾಸಭೆ

ಬೆಳ್ತಂಗಡಿ ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಮಹಾಸಭೆ
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ವಾರ್ಷಿಕ ಮಹಾಸಭೆಯು ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಘದ ಅಧ್ಯಕ್ಷರಾದ ಲಕ್ಷೀನಾರಾಯಣ ಕೆ. ಇವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ದಿವಾಕರ ಆಚಾರ್ಯ ಗೇರುಕಟ್ಟೆಯವರು ಮಾತನಾಡುತ್ತಾ, ಮುಖ್ಯ ಶಿಕ್ಷಕರು ಇಲಾಖೆ, ಸಮುದಾಯ ಮತ್ತು ಪೋಷಕರ ನಡುವಿನ ಸೇತುವಿನಂತೆ ಜವಾಬ್ದಾರಿ ನಿರ್ವಹಿಸುವವರು. ಸಮಾಜದ ಪರಿವರ್ತನೆಯಲ್ಲಿ ಇವರ ಪಾತ್ರ ಪ್ರಧಾನವಾಗಿದೆ. ಪ್ರಸ್ತುತ ಶಿಕ್ಷಕರ ಪ್ರತಿಭೆ ಮತ್ತು ಹವ್ಯಾಸಗಳು ಮಕ್ಕಳ ಪ್ರತಿಭಾ ವಿಕಸನಕ್ಕೆ ಬಳಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ನೂರು ಶೇಕಡಾ ಫಲಿತಾಂಶ ಸಾಧಿಸಿದ ಶಾಲೆಗಳಿಗೆ ಅತಿಥಿಗಳು ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನಿತ್ತು ಗೌರವಿಸಿದರು. ಸಭೆಯ ಪೂರ್ವದಲ್ಲಿ2022-23ನೇ ಶೈಕ್ಷಣಿಕ ವರ್ಷದ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆದು, ಸಂಘದ ನೂತನ ಅಧ್ಯಕ್ಷರಾಗಿ ವೇಣೂರು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ವೆಂಕಟೇಶ್ ತುಳಪುಳೆ, ಕಾರ್ಯದರ್ಶಿಯಾಗಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಹೇಮಲತಾ ಎಂ. ಆರ್.,ಜೊತೆ ಕಾರ್ಯದರ್ಶಿಯಾಗಿ ಕೊಕ್ರಾಡಿ ಪ್ರೌಢಶಾಲೆಯ ಶ್ರೀಕೃಷ್ಣ ಎಚ್. ಎಸ್., ಕೋಶಾಧಿಕಾರಿಯಾಗಿ ಸವಣಾಲು ಪ್ರೌಢಶಾಲೆಯ ಪ್ರಶಾಂತ್ ಎಲ್., ಸಂಘಟನಾ ಕಾರ್ಯದರ್ಶಿಯಾಗಿ ಪುತ್ತಿಲ ಪ್ರೌಢಶಾಲೆಯ ಟಿ. ಆರ್. ಮಂಜ ನಾಯ್ಕ್ ಆಯ್ಕೆಗೊಂಡರು. ಗೌರವ ಸಲಹೆಗಾರರು ಮತ್ತು ಲೆಕ್ಕ ಪರಿಶೋಧಕರಾಗಿ ಅಕ್ಷರ ದಾಸೋಹದ ಸಹ ನಿರ್ದೇಶಕರಾದ ತಾರಾಕೇಸರಿಯವರನ್ನು ಆಯ್ಕೆ ಮಾಡಲಾಯಿತು. ಜೊತೆಗೆ ಹನ್ನೆರಡು ಮಂದಿ ನಿರ್ದೆಶಕರನ್ನು ಸಮಿತಿಗೆ ಸೇರ್ಪಡೆಗೊಳಿಸಲಾಯಿತು. ಸಂಘದ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲುರವರು ಸ್ವಾಗತಿಸಿ, ಎಚ್. ಎಸ್. ಶ್ರೀಕೃಷ್ಣ ಕೊಕ್ರಾಡಿ ವಂದಿಸಿದರು. ರಾಧಾಕೃಷ್ಣ ತಚ್ಚಮೆ ಕೊಯ್ಯೂರು ಕಾರ್ಯಕ್ರಮ ನಿರೂಪಿಸಿದರು.

Latest 5

Related Posts