ನಿಷ್ಠಾವಂತ ಪೊಲೀಸ್ ಅಧಿಕಾರಿಯ ವರ್ಗಾವಣೆಗೆ ಆಕ್ರೋಶ

Facebook
Twitter
LinkedIn
WhatsApp

ಬೆಳ್ತಂಗಡಿ: ಎಸ್‌ಟಿ ಸಮುದಾಯದ ಭೂಮಿ ಯನ್ನು ಅಕ್ರಮವಾಗಿ ಇನ್ನೊಬ್ಬರ ಹೆಸರಿಗೆ ಪರಭಾರೆ ಮಾಡಿದ ಬೆಳ್ತಂಗಡಿಯ ಖ್ಯಾತ ವಕೀಲರೂ ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷರೂ ಆಗಿರುವ ಸುಬ್ರಮಣ್ಯ ಆಗರ್ತ ಇವರ ಮೇಲೆ ಎಫ್‌ಐಆರ್ ದಾಖಲು ಮಾಡಿದ ಉಪ್ಪಿನಂಗಡಿ ಪೊಲೀಸ್ ಠಾಣಾ ನಿಷ್ಠಾವಂತ ಅಧಿಕಾರಿಯಾದ ಕುಮಾರ್ ಸಿ. ಕಾಂಬ್ಳೆ ಇವರನ್ನು ಬಿಜೆಪಿ ಸರಕಾರ ವರ್ಗಾವಣೆ ಮಾಡಿದ್ದು; ಇದನ್ನು ಎಸ್ಟಿ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ರಿ. ಮಂಗಳೂರು ತೀವ್ರವಾಗಿ ಖಂಡಿಸುತ್ತದೆ.ಮರಾಟಿ ಸಮುದಾಯ ತೀರ ಬಡತನ ಕುಟುಂಬದಿಂದ ಈ ಜಿಲ್ಲಾ ಸಂಘಕ್ಕೆ ಮನವಿ ಬಂದಾಗ ನ್ಯಾಯಯುತವಾಗಿ ಸ್ಪಂದಿಸಿದ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಇತ್ತು ಎಸ್‌ಸಿ-ಎಸ್‌ಟಿ ನ್ಯಾಯಪರ ಸಂಘಟನೆ ನಿರಂತರವಾಗಿ ಹೋರಾಟದ ಫಲವಾಗಿ, ಉಪ್ಪಿನಂಗಡಿ ಪೊಲೀಸ್ ಠಾಣೆಯ ನಿಷ್ಠಾವಂತ ಪೋಲಿಸ್ ಸಬ್‌ ಇನ್ಸ್‌ಪೆಕ್ಟರ್ಕುಮಾರ್ ಸಿ. ಕಾಂಬ್ಳೆ ಆ ಕೇಸ್‌ನ್ನು ವಿಚಾರಿಸಿ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದೀಗ ಆರೋಪಿಗಳ ರಕ್ಷಣೆಗೆ ಮುಂದಾಗಿರುವ ರಾಜ್ಯ ಬಿಜೆಪಿ ಸರಕಾರ, ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಡರ್ ಕಾಂಬ್ಳೆಯವರನ್ನು ಅಲ್ಲಿಂದ ಬೇರೆ ಕಡೆ ವರ್ಗಾವಣೆ ಮಾಡಿದೆ.ಮತ್ತೇ ಈ ಹೊಲಸು ರಾಜಕೀಯದಿಂದಾಗಿ ಇಂದು ಎಸ್‌ಟಿ ಸಮುದಾಯದ ಬಡ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲು ವಿಫಲವಾಗಿದೆ.ಮುಂದೆ ಸಮುದಾಯದ ಪ್ರಮುಖರು ರಾಜಕೀಯವಾಗಿಯೂ ಸೇವೆ ಸಲ್ಲಿಸಲು ಮುಂದಿನ ಚುನಾವಣೆಯಲ್ಲಿ ಕಣಕ್ಕೆ ಇಳಿಯುವ ಸನ್ನಿವೇಶ ಎದುರಾಗಿದೆ. ಮರಾಟಿ ಸಮುದಾಯ ಹಿಂದುತ್ವ ಸಂಸ್ಕೃತಿಗಳ ಸಂಪ್ರದಾಯದ ಆಚರಣೆಯಲ್ಲಿ ಜೀವನವನ್ನು ನಡೆಸುತ್ತಿರುವ ಪ್ರಭಾವಿ ಸಮುದಾಯ. ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 20% ಸಮುದಾಯ ಮತಗಳು ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕವಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಮರಾಟಿ ಸಮುದಾಯದ ನೆರವಿಗೆ ಕಾನೂನಿನ ಕ್ರಮ ಕೈಗೊಂಡಿರುವ ಒಬ್ಬ ನಿಜವಾದ ಸಬ್ ಇನ್ಸ್‌ಪೆಕ್ಟರ್‌ರನ್ನು ಎತ್ತಂಗಡಿ ಮಾಡುವ ಇಂತಹ ರಾಜಕೀಯದ ವಿರುದ್ಧ ಹೋರಾಡಲು ಸಿದ್ದತೆ ನಡೆಸಬೇಕಾಗಿದೆ. ಇಲ್ಲವಾದರೆ ಮುಂದೆಯೂ ಸಮುದಾಯಕ್ಕೆ ಅನ್ಯಾಯ ವಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಇದನ್ನು ಪ್ರತಿಯೊಂದು ಸಮುದಾಯದ ಪ್ರತಿಯೊಬ್ಬ ಸದಸ್ಯರು ಅರಿತು ಕೊಳ್ಳ ಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯು ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗುವ ವರೆಗೂ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಮಂಗಳೂರಿನದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ) ಪ್ರಕಟಣೆಯೊಂದರಲ್ಲಿ ಸರಕಾರವನ್ನು ಎಚ್ಚರಿಸಿದೆ.

Latest 5

Related Posts