ಲಾಯಿಲ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ ಆರಂಭ

ಲಾಯಿಲ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ ಆರಂಭ
Facebook
Twitter
LinkedIn
WhatsApp

*ಬೆಳ್ತಂಗಡಿ: ಲಾಯ್ಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಲಾಯ್ಲ ಶ್ರೀ ರಾಘವೇಂದ್ರ ಮಠದಲ್ಲಿ ಮೂರು ದಿನಗಳ ಕಾಲ ನಡೆಯುವ 351ನೇ ಆರಾಧನಾ ಮಹೋತ್ಸವದ ಕಾರ್ಯಕ್ರಮಗಳನ್ನು ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ ಆಗಸ್ಟ್ 12ರಂದು ಉದ್ಘಾಟಿಸಿದರು.ರಾಘವೇಂದ್ರ ಮಠಕ್ಕೆ ಮುಗುಳಿ ಶಾರದಮ್ಮ ಮತ್ತು ಮಕ್ಕಳು ಸೇವಾ ರೂಪದಲ್ಲಿ ನೀಡಿದ 2.50ಲಕ್ಷ ರೂಪಾಯಿ ವೆಚ್ಚದ ಇಂಟರ್ ಲಾಕ್‌ನ್ನು ಮುಖ್ಯ ಅತಿಥಿ ಬೆಂಗಳೂರು ಉದ್ಯಮಿ ನಾರಾಯಣ ಗೌಡ ಬೇಗೂರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಉಮಾ ಆರ್. ರಾವ್, ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಕೋಶಾಧಿಕಾರಿ ವಸಂತ ಸುವರ್ಣ, ಟ್ರಸ್ಟಿಗಳಾದ ಜಿ. ಸೋಮೆ ಗೌಡ, ಮೋಹನ ರಾವ್ ಉಜಿರೆ, ಗೌರವ ಸಲಹೆಗಾರ ಮಂಜುನಾಥ ರೈ, ಮುಖ್ಯ ಅರ್ಚಕ ರಾಘವೇಂದ್ರ ಭಾಂಗಿಣ್ಣಾಯ, ಸೀನಿಯರ್ ಜೇಸಿ ಅಧ್ಯಕ್ಷ ಪೃಥ್ವಿರಂಜನ್ ಉಪಸ್ಥಿತರಿದ್ದರು.ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಸಲಹೆಗಾರ ಎ. ಕೃಷ್ಣಪ್ಪ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ಶೇಖರ ಬಂಗೇರ ವಂದಿಸಿದರು. ಉತ್ಸವ ಸಮಿತಿ ಸದಸ್ಯ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Latest 5

Related Posts