ಬೆಳ್ತಂಗಡಿ: ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸೆಪ್ಟೆಂಬರ್ 10ರಂದು ಕಲ್ಲೇರಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬಿ. ನಿರಂಜನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, 20 21- 22 ನೇ ಸಾಲಿನಲ್ಲಿ ಸಂಘವು ರೂಪಾಯಿ 233ಕೋಟಿ ವ್ಯವಹಾರ ನಡೆಸಿ ರೂಪಾಯಿ 1.11ಕೋಟಿ ಲಾಭಗಳಿಸಿದೆ.ಸದಸ್ಯರಿಗೆ 12% ಡಿವಿಡೆಂಡ್ ನೀಡಲು ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ ಎಂದುಘೋಷಣೆ ಮಾಡಿದರು. ಬರುವ ಮಹಾಸಭೆಯ ಒಳಗೆ ಸಂಘದ ಶತಮಾನೋತ್ಸವ ಸವಿನೆನಪಿಗಾಗಿ ಸಂಘದ ಮುಖ ಕಚೇರಿ ಹಿಂಭಾಗದಲ್ಲಿ ರೂಪಾಯಿ 1.92ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರುಮಹಾಸಭೆಯಲ್ಲಿ ಶಿಕ್ಷಕರಾದ ಯುವರಾಜ್ ಅನಾರು, ಧರ್ಣಪ್ಪ ನಾಯ್ಕ, ಕಮಲ ಹಾಗೂ ನಿವೃತ್ತ ಅಂಚೆ ಇಲಾಖೆಯ ಸಿಬ್ಬಂದಿ ಕಾಂತಪ್ಪರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ವರ್ಷ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿಸುರೇಂದ್ರ ಪ್ರಸಾದ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ತಾಜುದ್ದೀನ್ ನಿರ್ದೇಶಕರಾದ ಪೂವಪ್ಪ ಬಂಗೇರ, ರೋಹಿತ್ ಶೆಟ್ಟಿ, ಶ್ರೀಧರ ಗೌಡ, ಜಯಂತಿ ಪಾಲೇದು, ಓಬಯ್ಯ ಪೂಜಾರಿ, ಪುಷ್ಪಾಲತಾ, ಶೂರ, ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರುನಿರ್ದೇಶಕ ಜಗದೀಶ ಸ್ವಾಗತಿಸಿ, ನಿರ್ದೇಶಕ ಲಿಂಗಪ್ಪ ನಾಯ್ಕ ವಂದಿಸಿದರು.






