ಬೆಳ್ತಂಗಡಿ: ಸಿರಿಯನ್ ಕ್ಯಾಥೊಲಿಕ್ ವಿವಿದೋದ್ದೇಶ ಸಹಕಾರಿ ಸಂಘದ ಕಾಯರ್ತಡ್ಕ ಶಾಖೆಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 1ರಂದು ನಡೆಯಿತು.ಸೈಂಟ್ ಸೆಬಾಸ್ಟಿಯನ್ ಚರ್ಚ್ ಕಳೆಂಜದ ಧರ್ಮಗುರುಗಳಾದ ವಂದನೀಯ ಜೋಸೆಫ್ ವಾಳೂಕಾರನ್ ಅವರು ಆಶೀರ್ವಚನ ನೀಡಿ ಊರಿನ ಎಲ್ಲ ಜನರೂ ಸಹಕಾರದಿಂದ ವರ್ತಿಸಿದರೆ ಗ್ರಾಮ ಇನ್ನಷ್ಟು ಬೆಳವಣಿಗೆಯಾಗಲು ಸಾದ್ಯವಿದೆ.ಸಹಕಾರ ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು. ಉಳಿತಾಯದ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು. ನೂತನ ಶಾಖೆಯನ್ನು ಉದ್ಘಾಟಿಸಿದ ಕಳೆಂಜ ಗ್ರಾಮಪಂಚಾಯತು ಅಧ್ಯಕ್ಷ ಪ್ರಸನ್ನ ಎ.ಪಿ. ಅವರು ಮಾತನಾಡುತ್ತಾ, ಕಳೆಂಜ ಒಂದು ಗ್ರಾಮೀಣ ಪ್ರದೇಶ ವಾಗಿತ್ತು. ಇದೀಗ ಕಳೆಂಜ ಎಲ್ಲ ರೀತಿಯಲ್ಲಿಯೂ ಬೆಳವಣಿಗೆಯನ್ನು ಕಂಡಿದೆ. ಇದೀಗ ಇಲ್ಲಿ ಎಲ್ಲ ಸೌಲಭ್ಯಗಳಿರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮಾಡಿರುವುದು ಉತ್ತಮ ವಿಚಾರವಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಅನಿಲ್ ಎ.ಜೆ. ವಹಿಸಿ ಮಾತನಾಡುತ್ತಾ, ಸಂಘದ ಬೆಳವಣಿಗೆಯನ್ನು ವಿವರಿಸಿದರು. ಗಣಕಯಂತ್ರದ ಉದ್ಘಾಟನೆಯನ್ನು ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಭಟ್ ನೆರವೇರಿಸಿದರು. ಭದ್ರತಾ ಕೋಶದ ಉದ್ಘಾಟನೆಯನ್ನು ಸಂಘದ ಮಾಜಿ ಅಧ್ಯಕ್ಷ ಮ್ಯಾಥ್ಯೂ ಪಿ.ಜೆ. ನೆರವೇರಿಸಿದರು. ಇ-ಸ್ಟಾಂಪಿಂಗ್ ಘಟಕದ ಉದ್ಘಾಟನೆಯನ್ನು ಸಂಘದ ಮಾಜಿ ಅಧ್ಯಕ್ಷರಾದ ಸೆಬಾಸ್ಟಿಯನ್ ವಿ.ಟಿ. ನೆರವೇರಿಸಿದರು. ಷೇರು ಸರ್ಟಿಫಿಕೇಟ್‌ನ ವಿತರಣೆಯನ್ನು ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಸೆಬಾಸ್ಟಿಯನ್ ಪಿ.ಟಿ. ನೆರವೇರಿಸಿದರು.ನಿಡ್ಲೆ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಧನಂಜಯ ಗೌಡ , ಉಪಾದ್ಯಕ್ಷ ಜಾರ್ಜ್ ಎಂ.ವಿ., ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಪಿ.ಎ. ಸ್ವಾಗತಿಸಿದರು.






