ಮೂಡುಬಿದಿರೆ: ಡಿಸೆಂಬರ್ ತಿಂಗಳಲ್ಲಿ ಮೂಡುಬಿದಿರೆಯ ಆಳ್ವಾಸ್ನಲ್ಲಿ ನಡೆಯುವ ಅಂತರಾಷ್ಟ್ರೀಯ ಜಂಬೂರಿ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಮೂಡುಬಿದಿರೆ ಪುರಸಭಾ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸನಿಹದ ಕೆಲವು ಪಂಚಾಯತ್ ಆಡಳಿತಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಸಭೆಯಲ್ಲಿ ಸ್ವಚ್ಛ ಭಾರತದ ಪರಿಕಲ್ಪನೆ ಯೊಂದಿಗೆ ಸ್ವಚ್ಛ ಸುಂದರ ಮೂಡುಬಿದಿರೆ ಕುರಿತು ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕುರಿತು ಚರ್ಚಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ, ಪರಿಸರ ಅಭಿಯಂತರೆ ಶಿಲ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಭಾಕರ ಭಟ್, ಜಿಲ್ಲಾ ತರಬೇತಿ ಕಮಿಟಿಯ ಶ್ರೀಮತಿ ಜಯಶ್ರೀ, ಜಿಲ್ಲಾ ಸಂಚಾಲಕರಾದ ಡೊಂಬಯ್ಯ, ಅಶ್ವತ್ಥಪುರ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣಮೂರ್ತಿ, ಪಂಚಾಯತ್ ಪಿ.ಡಿ.ಒ ಗಳಾದ ಕಾಂತಪ್ಪ ಇರುವೈಲು, ಭೀಮಾನಾಯ್ಕ ಪುತ್ತಿಗೆ, ರಕ್ಷಿತಾ ಪಾಲಡ್ಕ, ಜ್ಯೋತಿ ಹೊಸಬೆಟ್ಟು, ಪಂಚಾಯತ್ ಕಾರ್ಯದರ್ಶಿಗಳಾದ ಶೇಖರ ಕಲ್ಲಮುಂಡ್ಕೂರು, ಸವಿತಾ ಹೊಸಬೆಟ್ಟು, ಪಡುಮಾರ್ನಾಡು ಪಂಚಾಯತ್ ಸಿಬ್ಬಂದಿ ಕಿಶೋರ್, ಪುರಸಭೆಯ ಸ್ವಚ್ಛತಾ ರಾಯಭಾರಿಗಳು ಉಪಸ್ಥಿತರಿದ್ದರು.






