ಸಿಯೋನ್ ಆಶ್ರಮದಲ್ಲಿ ದೀಪಾವಳಿ ಆಚರಣೆ

ಸಿಯೋನ್ ಆಶ್ರಮದಲ್ಲಿ ದೀಪಾವಳಿ ಆಚರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ಸಿಯೋನ್ ಆಶ್ರಮ ಗಂಡಿಬಾಗಿಲಿನಲ್ಲಿ ಅಕ್ಟೋಬರ್ 26ರಂದು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಿಯೋನ್ ಗೋಶಾಲೆಯಲ್ಲಿ ಗೋವುಗಳಿಗೆ ಹೂವಿನ ಹಾರ ಹಾಕಿ ಗೋಪೂಜೆ ಮಾಡಲಾಯಿತು. ಸಿಯೋನ್ ಸಭಾಂಗಣದಲ್ಲಿ ರಂಗೋಲಿ ಹಾಕಿ ದೀಪ ಹಚ್ಚಿ ವಿವಿಧ ಬಗೆಯ ಪಟಾಕಿಗಳನ್ನು ಸಿಡಿಸಿ ಆಶ್ರಮ ನಿವಾಸಿಗಳೆಲ್ಲರೂ ಸಂಭ್ರಮಿಸಿದರು. ಸಿಯೋನ್ ಸಂಸ್ಥೆಯ ಟ್ರಸ್ಟೀ ಸದಸ್ಯರುಗಳು, ಕುಟುಂಬಸ್ಥರು, ಸಿಬ್ಬಂದಿವರ್ಗದವರು, ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು. ವಿವಿಧ ಬಗೆಯ ಸಿಹಿತಿಂಡಿ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಲಾಯಿತು. ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನವನ್ನು ಹಿತೈಷಿಗಳಾದ ಜಯಪ್ರಕಾಶ್ ಶೆಟ್ಟಿ ಬೆಳ್ತಂಗಡಿ ಇವರು ಒದಗಿಸಿದ್ದರು.

Latest 5

Related Posts