ಟೊಬೆಳ್ತಂಗಡಿ: ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ವಾರ್ಷಿಕ ದೀಪೋತ್ಸವ ನವೆಂಬರ್ 13ರಂದು ಜರಗಿತು.ಶ್ರೀ ಪರಶುರಾಮ, ಸಿದ್ಧಿ ವಿನಾಯಕ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸೇವೆಗಳು, ಶ್ರೀ ದೇವರಿಗೆ ಅಡಕೆ, ತೆಂಗು ಹಾಗೂ ಇತರ ಕೃಷಿ ಉತ್ಪನ್ನಗಳ ಸಹಿತ ರಾಶಿ ಪೂಜೆ, ಮಹಾಪೂಜೆ, ಸಂಜೆ ದೇವರ ಉತ್ಸವ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಜರಗಿತು.ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಪುಟಾಣಿ ಮಕ್ಕಳಿಂದ ಮನರಂಜನೆ, ಸುಧಾಕರ ದೇವಾಡಿಗ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಯಕ್ಷಗಾನ ಮೊದಲಾದ ಕಾರ್ಯಕ್ರಮಗಳು ಜರಗಿದವು.ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಸಹಿತ ಗಣ್ಯರು ಭೇಟಿ ನೀಡಿದರು.






