ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದ ಬಳಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಶಾಶ್ವತ ಮಾರಾಟ ಮಳಿಗೆ ನವೆಂಬರ್ 19ರಂದು ಉದ್ಘಾಟನೆಗೊಂಡಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭೆಯ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತುಹೆಗ್ಗಡೆಯವರವ ಮೊಮ್ಮಗಳು ಮಾನ್ಯಾ ದೀಪ ಪ್ರಜ್ವಲಿಸಿ ಉದ್ಘಾಟನೆ ನೆರವೇರಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ಎನ್. ಜನಾರ್ಧನ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಸಿರಿ ಸಂಸ್ಥೆಯ ನಿರ್ದೇಶಕ ಪ್ರಸನ್ನ, ಮಾರುಕಟ್ಟೆ ವಿಭಾಗದ ಅಧಿಕಾರಿ ವಿನ್ಸೆಂಟ್ ಮೊದಲಾದವರು ಉಪಸ್ಥಿತರಿದ್ದರು.ಸಿರಿ ಸಂಸ್ಥೆ ಈಗಾಗಲೇ ಮಂಗಳೂರಿನಲ್ಲಿ 2, ಧರ್ಮಸ್ಥಳದಲ್ಲಿ 2, ಹಾಸನದಲ್ಲಿ 1, ಬೆಂಗಳೂರು 1, ಧಾರವಾಡ 1 ಮತ್ತು ಉಡುಪಿ ಪರೀಕದಲ್ಲಿ 1 ಶಾಶ್ವತ ಮಾರಾಟ ಮಳಿಗೆ ಕಾರ್ಯಾಚರಿಸುತ್ತಿದ್ದು, ಧರ್ಮಸ್ಥಳದ ಈ ಮಳಿಗೆ 14ನೇ ಮಳಿಗೆಯಾಗಿದೆ.






