ಬೆಳ್ತಂಗಡಿ: ಉಜಿರೆ ಗ್ರಾಮದ ಕಲ್ಲೆ ಅಜಿತ್ ನಗರದಲ್ಲಿ ಶ್ರೀ ನಾಗಬ್ರಹ್ಮ, ಶ್ರೀ ವನದುರ್ಗಾ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಶ್ರೀ ರಕ್ತೇಶ್ವರಿ, ಮಹಿಸಂದಾಯ, ಕಲ್ಲುರ್ಟಿ,ಪಂಜುರ್ಲಿ ಹಾಗೂ ಗುಳಿಗ ದೈವಗಳ ಪುನಃ ಪ್ರತಿಷ್ಠಾ ಕಲಶೋತ್ಸವ ಕಾರ್ಯಕ್ರಮಗಳ ಅಂಗವಾಗಿ ವೈದಿಕ ಕಾರ್ಯಕ್ರಮಗಳು ಜನವರಿ 24ರಂದು ಆರಂಭಗೊಂಡವು.ಋತ್ವಿಜರ ಆಗಮನ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಋತ್ವಿಗ್ವರಣೆ, ಆದ್ಯ ಗಣಪತಿ ಹೋಮ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸಪ್ತ ಶುದ್ಧಿ, ವಾಸ್ತುಪೂಜೆ, ವಾಸ್ತುಹೋಮ, ರಾಕ್ಷೋಘ್ನ ಹೋಮ, ದಿಕ್ಪಾಲಬಲಿ ಮೊದಲಾದ ಕಾರ್ಯಕ್ರಮಗಳು ಜರಗಿದವು.ದೈವಜ್ಞರಾದ ಸುರತ್ಕಲ್ ನಾಗೇಂದ್ರ ಭಾರಾದ್ವಾಜ್, ವೇದಮೂರ್ತಿ ರಾಜಗೋಪಾಲ ಯಡಪಾಡಿತ್ತಾಯ, ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಶರತ್‌ಕೃಷ್ಣ ಪಡುವೆಟ್ನಾಯ, ಅನಂತ ಮೋಹನ ರಾವ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಕಲ್ಮಂಜ ಗ್ರಾಮ ಅಧ್ಯಕ್ಷ ಶ್ರೀಧರ, ಲೀಲಾವತಿ ರಾಜು ಮೇಸ್ತ್ರಿ, ಮೋಹನ್ ಕುಮಾರ್, ರೇಷ್ಮಾ, ರಾಜೇಶ್ ಪೈ, ಲಕ್ಷ್ಮಣ ಸಪಲ್ಯ, ಉದಯ ಚಂದ್ರ ಶೆಟ್ಟಿ, ವೆಂಕಟರಮಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.






