ಬೆಳ್ತಂಗಡಿಯಲ್ಲಿ ಮಾ. 4 ಹಾಗೂ 5ರಂದು ವಿಶ್ವ ಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶ

ಬೆಳ್ತಂಗಡಿಯಲ್ಲಿ ಮಾ. 4 ಹಾಗೂ 5ರಂದು ವಿಶ್ವ ಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶ
Facebook
Twitter
LinkedIn
WhatsApp

ಬೆಳ್ತಂಗಡಿ : ಸ್ಥಾನಿಕ ಬ್ರಾಹ್ಮಣ ಮಹಾಮಂಡಲ (ರಿ.) ಮಂಗಳೂರು ಆಯೋಜನೆಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಇದರ ಆಶ್ರಯದಲ್ಲಿವಿಶ್ವ ಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶವು ಮಾರ್ಚ್ 4 ಹಾಗೂ 5ರಂದು ಬೆಳ್ತಂಗಡಿಯ ಲ್ಯಾಲ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ನಡೆಯಲಿದೆ ಎಂದು ಸ್ಥಾನಿಕ ಬ್ರಾಹ್ಮಣ ಮಹಾ ಮಂಡಲದ ಅಧ್ಯಕ್ಷ ಎಂ. ದೇವಾನಂದ ಭಟ್ ತಿಳಿಸಿದ್ದಾರೆ. ಅವರು ಫೆಬ್ರವರಿ 28ರಂದು ಲ್ಯಾಲ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ನಡೆದ ಪತ್ತಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.ಮಾರ್ಚ್ 4ರಂದು ಬೆಳಿಗ್ಗೆ ಸಮಾವೇಶವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಲಿದ್ದು, ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರು ಭೀಮೇಶ್ವರ ಜೋಷಿ ಅವರು ಶುಭಾಶಂಸನೆಗೈಯಲಿದ್ದಾರೆ. ಸಭಾಧ್ಯಕ್ಷತೆಯನ್ನು ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ಅಧ್ಯಕ್ಷ ಎಂ. ದೇವಾನಂದ ಭಟ್ ಬೆಳುವಾಯಿ ವಹಿಸಲಿದ್ದು. ಸಮ್ಮೇಳನಾಧ್ಯಕ್ಷತೆಯನ್ನು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ಅಧ್ಯಕ್ಷ ಪಿ. ರಾಧಾಕೃಷ್ಣ ರಾವ್ ವಹಿಸಲಿದ್ದಾರೆ. ಮುಖ್ಯ ಅಭ್ಯಾಗತರುಗಳಾಗಿ ವಿಧಾನ ಪರಿಷತ್ ಸದಸ್ಯರು ಕೆ. ಪ್ರತಾಪಸಿಂಹ ನಾಯಕ್, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜ ಭಾಗವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ಸಾಧಕರಾದ ಯು. ಕೆ. ಪ್ರವೀಣ್, ಮಂಗಳೂರು (ಕಲಾಕ್ಷೇತ್ರ), ಡಾ| ಶ್ರೀಕಾಂತ್ ರಾವ್ ಪುತ್ತೂರು (ವೈದ್ಯಕೀಯ), ರತ್ನಾಕರ ರಾವ್ ಮೂಡಬಿದ್ರೆ (ಗುಡಿ ಕೈಗಾರಿಕೆ), ತೋಟಾಲು ಮೋಹನ್ ರಾವ್ ಮೈಸೂರು (ಸಮಾಜಸೇವೆ), ಡಾ| ಪಿ.ಜಿ. ರಾವ್ ಉಡುಪಿ (ವೈದ್ಯಕೀಯ), ಡಾ. ಕೆ. ಕೆ. ಶಾನಭೋಗ್ ಕಾಸರಗೋಡು (ಸ್ಥಾನಿಕ ಸಮಾಜಸೇವೆ), ಕೇಶವ್ ರಾವ್ ಕೆ. ಎಸ್. ಕಾರ್ಕಳ (ಸಮಾಜಸೇವೆ), ಡಾ| ಸದಾಶಿವ ರಾವ್ ಸುಳ್ಯ (ಸ್ಥಾನಿಕ ಸಂಘಟನೆ). ಶರಾವತಿ ರವಿರಾಜ್ ರಾವ್ ಪಡುಬಿದ್ರಿ (ಕೃಷಿ), ನಾಗರತ್ನ ಹೆಬ್ಬಾರ್ ಕುಂದಾಪುರ (ಸಾಹಿತ್ಯ), ರತ್ನಾಕರ ರಾವ್ ಸುರತ್ಕಲ್ (ಶೈಕ್ಷಣಿಕ), ಬಿ.ಕೆ. ಧನಂಜಯ್ ರಾವ್ ಬೆಳ್ತಂಗಡಿ (ಕಾನೂನು ಸೇವೆ), ಶಿವಾನಂದ ಕೋಟ ಬ್ರಹ್ಮಾವರ (ಯಕ್ಷಗಾನ), ಶಂಕರನಾರಾಯಣ ಹೆಬ್ಬಾರ್ ಕಬ್ಬಿನಾಲೆ (ವೈದಿಕ), ಮಂಜುನಾಥಯ್ಯ‌ ಸೌಕೂರು, (ಜ್ಯೋತಿಷ್ಯ), ಭಾಗ್ಯಚಂದ್ರ ರಾವ್ ರಾಮಕುಂಜ (ಜ್ಯೋತಿಷ್ಯ), ಲಕ್ಷ್ಮೀ ಅಮ್ಮ ನಂದಾವರ ಬಂಟ್ವಾಳ (ಶೈಕ್ಷಣಿಕ), ಉಮೇಶ್ ಪಂಜ ಮುಂಬೈ (ಸಂಘಟನೆ)ಯವರಿಗೆ ಸಮ್ಮಾನ ನಡೆಯಲಿದೆ ಎಂದು ದೇವಾನಂದ ಭಟ್ ತಿಳಿಸಿದರು.ಮಾರ್ಚ್ 4ರಂದು ಅಪರಾಹ್ನ ಮಹಿಳಾ ವಿಚಾರ ಗೋಷ್ಠಿ-‘ಸಂಸಾರ, ಸಂಸ್ಕೃತಿಯ ರಕ್ಷಣೆಯಲ್ಲಿ ಮಾತೆಯರ ಜವಾಬ್ದಾರಿ’ ನಡೆಯಲಿದ್ದು, ಸರಕಸರಿ ಪದವಿಪೂರ್ವ ಕಾಲೇಜು, ಬ್ರಹ್ಮಾವರದ ಉಪನ್ಯಾಸಕಿ ಸವಿತಾ ಎರ್ಮಾಳ್ ಅಧ್ಯಕ್ಷತೆ ವಹಿಸಲಿದ್ದು, ಸ್ತ್ರೀರೋಗ ತಜ್ಜೆ ಡಾ| ವೀಣಾ ಪಾಲಚಂದ್ರ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರತ್ನ ಶಾಸ್ತ್ರಿ, ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರ್ಣಗೌರಿ ಲಕ್ಷ್ಮೀನಾರಾಯಣ ರಾವ್ ಇವರು ವಿಷಯ ಮಂಡಿಸಲಿದ್ದಾರೆ. ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ನಿರ್ದೇಶಕಿ ಡಾ. ನಿರ್ಮಲಾ ಹರಿಕೃಷ್ಣ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಸಂಘದ ಅಧ್ಯಕ್ಷರುಗಳಾದ ಹರ್ಷ ಕುಮಾರ್ ಕೇದಗೆ, ಮಂಗಳೂರು, ಮಂಜುನಾಥ ಹೆಬ್ಬಾರ್ ಉಡುಪಿ, ಎನ್.ಕೆ. ಜಗನ್ನಿವಾಸ ರಾವ್ ಪುತ್ತೂರು, ಸುಭಾಸ್‌ಚಂದ್ರ ರಾವ್ ಮುಂಬೈ, ಮಾಧವ ರಾವ್ ಸುರತ್ಕಲ್, ಡಾ. ರಾಧಾಕೃಷ್ಣ ಕೋಲ್ಪೆ ಮೈಸೂರು ಉಪಸ್ಥಿತರಿರುವರು.ಮಾರ್ಚ್ 5ರಂದು ಬೆಳಿಗ್ಗೆ ಹಿರಿಯ ನಾಗರಿಕರ ವಿಚಾರ ಗೋಷ್ಠಿ ’ಪ್ರಸ್ತುತ ಕಾಲಘಟ್ಟದಲ್ಲಿ ಹಿರಿಯ ನಾಗರಿಕರ ಜವಾಬ್ದಾರಿ’ ನಡೆಯಲಿದ್ದು ಅಧ್ಯಕ್ಷತೆಯನ್ನು ವಕೀಲರಾದ ಎನ್. ಕೆ. ಜಗನ್ನಿವಾಸ ರಾವ್ ಪುತ್ತೂರು ವಹಿಸಲಿದ್ದಾರೆ. ಕೆ.ಎಂ.ಸಿ.ಯ ಹಿರಿಯ ವೈದ್ಯಕೀಯ ಪ್ರಾಧ್ಯಾಪಕರಾದ ಡಾ| ಬಿ. ಹೆಚ್. ಕೃಷ್ಣಮೂರ್ತಿ ರಾವ್, ಕಾಸರಗೋಡಿನ ಜ್ಯೋತಿಷ್ಯ ಶಾಸ್ತ್ರಜ್ಞ ಸುಕುಮಾರ್ ಅಲಂಪಾಡಿ, ಕರ್ಣಾಟಕ ಬ್ಯಾಂಕ್ ನಿವೃತ್ತ ಜನರಲ್ ಮೆನೇಜರ್ ಚಂದ್ರಶೇಖರ ರಾವ್ ಬೊಕ್ಕಸ ವಿಷಯ ಮಂಡಿಸಲಿದ್ದಾರೆ. ಸಮನ್ವಯಕಾರರಾಗಿ ನಿವೃತ್ತ ಪಂಚಾಯತ್‌ರಾಜ್ ತರಬೇತಿದಾರರು ಸೀತಾರಾಮ್ ಹೆಬ್ಬಾರ್ ಕಬ್ಬಿನಾಲೆ ಕಾರ್ಯನಿರ್ವಹಿಸಲಿದ್ದಾರೆ. ವೇದಿಕೆಯಲ್ಲಿ ಸಂಘದ ಅಧ್ಯಕ್ಷರುಗಳಾದ ಎಂ. ದೇವಾನಂದ ಭಟ್ ಮೂಡುಬಿದಿರೆ, ಕುಮಾರಸ್ವಾಮಿ ಸುಳ್ಯ, ಸತ್ಯನಾರಾಯಣ ಹೆಬ್ಬಾರ್ ಕುಂದಾಪುರ, ಕೇಶವ ರಾವ್ ಕೆ. ಎಸ್. ಕಾರ್ಕಳ, ಪಿ. ರಾಧಾಕೃಷ್ಣ ರಾವ್ ಬೆಳ್ತಂಗಡಿ, ಅರುಣ್ ಜಡೆಮನೆ ಕಡಬ ಉಪಸ್ಥಿತರಿರುವರು.ಮಧ್ಯಾಹ್ನ ಯುವ ವಿಚಾರ ಗೋಷ್ಠಿ ‘ಪ್ರತಿಭಾ ಪಲಾಯನ ಹಾಗೂ ಪರಂಪರೆಯಲ್ಲಿ ಯುವಕರ ಪಾತ್ರ’ ನಡೆಯಲಿದ್ದು; ಇದರ ಅಧ್ಯಕ್ಷತೆಯನ್ನು ಬೆಂಗಳೂರು ಹೈಕೋರ್ಟ್ ವಕೀಲರಾದ ಹರೀಶ್ ಕುಮಾರ್ ಎಂ. ಎಸ್. ವಹಿಸಲಿದ್ದು,ಬೆಂಗಳೂರು ಹೈಕೋರ್ಟ್ ವಕೀಲರಾದ ಪ್ರಶಾಂತ್ ಬಿ. ಕೆ., ಅಧ್ಯಾಪಕಿ ರಮ್ಯಾ ಆರುಣ್ ಕುಮಾರ್, ಮುಂಡೂರು, ಮೆಡಿಕಲ್ ಇಂಜಿನಿಯರಿಂಗ್ ಮ್ಯಾನೇಜರ್ ಮೆಟ್ರೋನಿಕ್ ಬೆಂಗಳೂರು ಇಲ್ಲಿನ ಕೃಷ್ಣರಾಜ್ ನೆಲ್ಲಿಕುಂಜ ವಿಷಯ ಮಂಡಿಸಲಿದ್ದು, ಉಡುಪಿ ಸ್ಪಂದನ ಟಿ.ವಿ. ವರದಿಗಾರ ನಾಗರಾಜ್ ರಾವ್ ವರ್ಕಾಡಿ ಸಮನ್ವಯಕಾರರಾಗಿ ನಿರ್ವಹಿಸಲಿದ್ದಾರೆ. ವೇದಿಕೆಯಲ್ಲಿ ಸಂಘದ ಅಧ್ಯಕ್ಷರುಗಳಾದ ಕೆ. ಜೆ. ಶ್ಯಾನುಭೋಗ್, ಕಾಸರಗೋಡು, ಎಂ. ಕೆ. ಮೋಹನ್ ರಾವ್ ಪಡುಬಿದ್ರಿ, ಕೆ. ಗುರುಪ್ರಸಾದ್ ಹೆಬ್ಬಾರ್ ಕಬ್ಬಿನಾಲೆ, ಸೀತಾರಾಮ ಹೆಬ್ಬಾರ್ ಕಬ್ಬಿನಾಲೆ, ಬಿ. ಮಂಜುನಾಥ್ ರಾವ್ ಬ್ರಹ್ಮಾವರ, ಎ. ಕೃಷ್ಣ ಶರ್ಮ, ಬಂಟ್ವಾಳ ವಲಯ ವಿಟ್ಲ ಉಪಸ್ಥಿರಿರುವರು.ಅಂದು ಸಂಜೆ ಗಂಟೆ 5ರಿಂದ ಶ್ರೀ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಶ್ರೀ ಶ್ರೀಮದ್ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಆಶೀರ್ವಚನ ನಡೆಯಲಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಶೃಂಗೇರಿ ಮಠ ಮಂಗಳೂರು ಪ್ರಾಂತ್ಯ ಧರ್ಮಾಧಿಕಾರಿಗಳಾದ ಸತ್ಯ ಶಂಕರ ಬೊಳ್ಳಾವ ಕೋಟೆಕಾರ್, ಶೃಂಗೇರಿ ಮಠ ಉಡುಪಿ ಪ್ರಾಂತ್ಯ ಧರ್ಮಾಧಿಕಾರಿಗಳಾದ ವಾಗೀಶ ಶಾಸ್ತ್ರಿ ಪಾವಂಜೆ ಉಪಸ್ಥಿತರಿತುವರು. ಇದೇ ಸಂದರ್ಭದಲ್ಲಿ ಸಮಸ್ತ ಸ್ಥಾನಿಕ ಬ್ರಾಹ್ಮಣ ಸಮಾಜ ಬಾಂಧವರ ವತಿಯಿಂದ ಶ್ರೀ ಶ್ರೀಮದ್ಜಗದ್ಗುರುಗಳಿಗೆ ಗೌರವದ ಭಿನ್ನವತ್ತಳೆ ಸಮರ್ಪಣೆ ನಡೆಯಲಿದೆ. ಕಾರ್ಪೋರೇಶನ್ ಬ್ಯಾಂಕ್‌ನ ನಿವೃತ್ತ ಡಿ.ಜಿ. ಎಂ. ಹಾಗೂ ಸ್ಥಾನಿಕ ಸಂಘಗಳ ಮಾಜಿ ಅಧ್ಯಕ್ಷರಾದ ಉಡುಪಿ ಚಿಟ್ಟಾಡಿ ಸರ್ವೋತ್ತಮ ರಾವ್ ಅವರಿಗೆ ’ಸ್ಥಾನಿಕರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು. ಅಂತೆಯೇ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಎನ್.ಕೆ. ಜಗನ್ನಿವಾಸ ರಾವ್ ಪುತ್ತೂರು, ಕಾರ್ಯಾಧ್ಯಕ್ಷ ಪಿ. ರಾಧಾಕೃಷ್ಣ ರಾವ್ ಧರ್ಮಸ್ಥಳ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಧನಂಜಯ ರಾವ್, ಗೌರವ ಸಲಹೆಗಾರ ಎಂ.ಎಸ್. ಅರುಣ್ ಕುಮಾರ್ ಉಜಿರೆ, ದಿನೇಶ್ ಕುಮಾರ್ ಎಂ.ಎಸ್., ಸಹಕಾರ್ಯದರ್ಶಿ ಕೆ. ಮುರಲಿಧರ ಶರ್ಮ ನಿಟ್ಟೆ, ಕೋಶಾಧಿಕಾರಿ ಎನ್.ಎಸ್. ನಟರಾಜ್ ಪುತ್ತೂರು, ಸಂಚಾಲಕ ಉದಯ ಕುಮಾರ್ ರಾವ್ ಮಂಗಳೂರು ಉಪಸ್ಥಿತರಿದ್ದರು.

Latest 5

Related Posts