ಬೆಳ್ತಂಗಡಿ: ಶ್ರೀ ಕ್ಷೇತ್ರ ಚಂದ್ರಾಪುರ ಶಿಶಿಲದ ಭಗವಾನ್ ಶ್ರೀ ೧೦೦೮ ಜಿನಮಂದಿರದ ವಾರ್ಷಿಕೋತ್ಸವವು ಕಾರ್ಕಳ ಜೈನ ಮಠದ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗಡೆಯವರ ಮಾರ್ಗದರ್ಶನದೊಂದಿಗೆ. ವಿಮಾನ ಶುದ್ದಿ, ೨೪ ಕಳಶಾಭಿಷೇಕ, ಲಕ್ಷ ಹೂವಿನ ಪೂಜೆ, ಶ್ರೀ ಉತ್ಸವ ಮುಂತಾದ ಪೂಜಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಸಮಾಜದ ಗಣ್ಯರು ಹಾಗೂ ಸಾಧಕರಾದ ಪತ್ರಕರ್ತ ನಾಭಿರಾಜ ಪೂವಣಿ ಉಜಿರೆ, ಡಾ| ಜಯಕುಮಾರ್ ಶೆಟ್ಟಿ ಉಜಿರೆ, ಮುನಿರಾಜ ರೆoಜಾಳ, ನಿರಂಜನ್ ಜೈನ್ ಕುದ್ಯಾಡಿ, ಅಜಿತ್ ಕುಮಾರ್ ಕಾರ್ಕಳ, ಧನ್ಯ ಕುಮಾರ್ ಅಂತರ, ಪೂಜಿತ ವರ್ಮ ಉಜಿರೆಯವರನ್ನು ಸಮ್ಮಾನಿಸಲಾಯಿತು ವೇದಿಕೆಯಲ್ಲಿ ಎಸ್. ಡಿ. ಶೆಟ್ಟಿ ಉಜಿರೆ, ಶುಭಕರ ಹೆಗ್ಡೆ ಇಚಿಲಾಮ್ಪಾಡಿ ಬೀಡು, ಪಿ. ಎನ್. ರವಿರಾಜ್, ಚಿತ್ತರಂಜನ್ ಜೈನ್, ಫಣಿರಾಜ್ ಜೈನ್, ಜಿನರಾಜ್ ಪೂವಣಿ, ಸಂಪತ್ ಕುಮಾರ್, ನಾಗಕನ್ನಿಕಾ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಡಂಗಡಿಯ ಸಂಪತ್ ಕುಮಾರ್ ಉಚಿತವಾಗಿ ನೀಡಿದ ಸೋಲಾರ್ ಹೈಮಾಸ್ಟ್ ಲೈಟನ್ನು ಉದ್ಘಾಟಿಸಲಾಯ್ತು. ಆಡಳಿತ ಮಂಡಳಿ ಅಧ್ಯಕ್ಷರಾದ ವಿಜಯಕುಮಾರ್ ಗಣ್ಯರನ್ನು ಸ್ವಾಗತಿಸಿದರು ಡಾ. ಕೆ. ಜಯಕೀರ್ತಿ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಯುವರಾಜ್ ಪೂವಣಿ ವಂದಿಸಿದರು. ಮನೋರಮ ಕಾರ್ಯಕ್ರಮ ನಿರೂಪಿಸಿದರು.






