ಕಥೋಲಿಕ್ ಸೊಸೈಟಿ ಬೆಳ್ಳಿ ಹಬ್ಬದ ಸಮಾರೋಪ

ಕಥೋಲಿಕ್ ಸೊಸೈಟಿ ಬೆಳ್ಳಿ ಹಬ್ಬದ ಸಮಾರೋಪ
Facebook
Twitter
LinkedIn
WhatsApp

ಬೆಳ್ತಂಗಡಿ: ಕಳೆದ 25ವರ್ಷಗಳಿಂದ ಬೆಳ್ತಂಗಡಿ ಪೇಟೆಯ ಹೃದಯಭಾಗದಲ್ಲಿ ಅತ್ಯಂತ ಯಶಸ್ವಿಯಾಗಿ ಆರ್ಥಿಕ ವ್ಯವಹಾರ ನಡೆಸುತ್ತಾ; ಗ್ರಾಹಕರ ಪ್ರೀತಿ ವಿಶ್ವಾಸಗಳಿಗೆ ಪಾತ್ರವಾಗಿ ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಿದ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘದ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭವು ಎಪ್ರಿಲ್ 15ರ ಶನಿವಾರ ಬೆಳ್ತಂಗಡಿಯ ಸಿ.ವಿ.ಸಿ. ಹಾಲ್‌ನಲ್ಲಿ ಸಂಘದ ಅಧ್ಯಕ್ಷ ಹೆನ್ರಿ ಲೋಬೊರ ಅಧ್ಯಕ್ಷತೆಯಲ್ಲಿ ನಡೆಯಿತು.ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂದನೀಯ ಜೋಸೆಫ್ ಕಾರ್ಡೋಜಾ ಕಾರ್ಯಕ್ರಮ ಉದ್ಘಾಟಿಸಿ, ಸಂಘದ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿದರು. ಬ್ರಹ್ಮಾವರ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಲೇರಿಯನ್ ಮಿನೇಜಸ್, ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘದ ಸ್ಥಾಪಕ ಮುಖ್ಯ ಪ್ರವರ್ತಕ ಫ್ರಾಂಕಿ ಡಿ’ಸೋಜಾ, ಸ್ಥಾಪಕ ಸಂಚಾಲಕ ಪೀಟರ್ ಕಾಲಿಸ್ಟ್ ಡಿ’ಸೋಜಾ, ಬೆಳ್ತಂಗಡಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಬಿ. ಪ್ರತಿಮಾ, ಸಂಘದ ಕಾನೂನು ಸಲಹೆಗಾರ ಕೃಷ್ಣ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಂಸ್ಥೆಗೆ ಶುಭ ಹಾರೈಸಿದರು.ಸಂಘದ ಸ್ಥಾಪಕ ಮುಖ್ಯ ಪ್ರವರ್ತಕರಿಗೆ, ಸ್ಥಾಪಕ ಸಂಚಾಲಕರಿಗೆ ಹಾಗೂ ಪ್ರವರ್ತಕರಿಗೆ; ಮತ್ತು ಕಳೆದ 25 ವರ್ಷಗಳಿಂದ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಸಹಕಾರಿ ಬಂಧುಗಳನ್ನು ಕಾರ್ಯಕ್ರಮದಲ್ಲಿ ಗುರುತಿಸಿ ಸಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಜೇಮ್ಸ್ ಡಿ’ಸೋಜಾ, ಅಲ್ಫೋನ್ಸ್ ರೋಡ್ರಿಗಸ್, ಪ್ರಸಾದ್ ಪಿಂಟೊ, ಜೋಸೆಫ್ ಪೀಟರ್ ಸಲ್ದಾನಾ, ವಿನ್ಸೆಂಟ್ ಪ್ರಕಾಶ್ ಪಿಂಟೊ, ರಫಾಯಲ್ ವೇಗಸ್, ತೋಮಸ್ ಆರ್. ನೊರೊನ್ಹಾ, ಸಂಘದ ವಿವಿಧ ಶಾಖಾ ಪ್ರಬಂಧಕರು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕರಾದ ಪೌಲಿನ್ ರೇಗೊ ಮತ್ತು ವಿನಯ್ ಜಾನ್ಸನ್ ಡಿ’ಸೋಜಾ ನಿರೂಪಿಸಿದ ಕಾರ್ಯಕ್ರಮದಲ್ಲಿ ನಿರ್ದೇಶಕ ಹೆರಾಲ್ಡ್ ಪಿಂಟೊ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ಸಂಘ ನಡೆದುಬಂದ ಹಾದಿಯ ಬಗ್ಗೆ ವರದಿ ಮಂಡಿಸಿದರು. ನಿರ್ದೇಶಕರಾದ ರಿಯೋ ಮೈಕಲ್ ರೊಡ್ರಿಗಸ್ ಮತ್ತು ಫ್ಲಾವಿಯಾ ಡಿ’ಸೋಜಾ ಸಮ್ಮಾನಿತರನ್ನು ಪರಿಚಯಿಸಿದರು. ಉಪಾಧ್ಯಕ್ಷ ಡೇನಿಸ್ ಸಿಕ್ವೇರಾ ವಂದಿಸಿದರು.

Latest 5

Related Posts