ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನೆರಿಯ ವಲಯದ ಬಯಲು ನಿವಾಸಿಗಳಾದ ಜಯಂತ್ ಶೆಣೈ ಹಾಗೂ ವಿದ್ಯಾ ದಂಪತಿಗಳ ಮಗಳು 22ರ ವಯೋಮಾನದ ಶ್ವೇತಾರವರಿಗೆ ನಡೆದಾಡಲು ಶಕ್ತಿ ಇಲ್ಲದೇ ಇದ್ದು; ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉಚಿತವಾಗಿ ನೀಡಿರುವ ಕಾಮೋಡ್ ವ್ಹೀಲ್ ಚಯರ್‌ನ್ನು ಜನಜಾಗೃತಿ ವೇದಿಕೆಯ ವಲಯ ಕೋಶಾಧಿಕಾರಿ ಶರೀಫ್ ಕೆ., ವಲಯ ಅಧ್ಯಕ್ಷ ಸತೀಶ್ ಕುಕ್ಕೆಜಾಲು, ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ನವೀನ್ ಕುಮಾರ್, ಸೇವಾಪ್ರತಿನಿಧಿಯಾದ ಸುಮಿತ್ರಾ ಉಪಸ್ಥಿತರಿದ್ದರು.









