ಬೆಳ್ತಂಗಡಿ: ಮೂಡಬಿದ್ರಿ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು 2003ರಲ್ಲಿ ಖರೀದಿಸಿದ ಟೊಯೋಟಾ ಕ್ವಾಲೀಸ್ ವಾಹನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರ ಕಾರು ಸಂಗ್ರಹಾಲಯಕ್ಕೆ ಅಗತ್ಯ ದಾಖಲೆಗೆ ಸಹಿ ಮಾಡಿ ವರ್ಗಾಯಿಸಿದರು. 108 ಶಾಂತಿಸಾಗರ ಆಚಾರ್ಯರ ಪಾದಾರೋಹಣ ಶತಾಬ್ದಿ ಮಹೋತ್ಸವ ಶ್ರೀ ಮಠದ ವತಿಯಿಂದ ವೇಣೂರು ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭ ನೆರವೇರಿಸಿದ ನೆನಪಿನಲ್ಲಿ ಡಿ. ವೀರೇಂದ್ರ ಹೆಗ್ಗಡೆ ದಂಪತಿಗಳನ್ನು ಸ್ವಾಮೀಜಿ ಗೌರವಿಸಿ, ಹರಸಿ ಅಭಿನಂದನಾ ಪತ್ರ ಹಾಗೂ ಶ್ರೀಫಲ ಮಂತ್ರಾಕ್ಷತೆ ನೀಡಿ ಹರಸಿದರು. ಹೆಗ್ಗಡೆಯವರು ಧರ್ಮಸ್ಥಳದ ಕಾರು ಸಂಗ್ರಹಾಲಯಕ್ಕೆ ಮೋಟಾರ್ ಕಾರು ಕೊಡುಗೆ ನೀಡಿದ ಸ್ವಾಮೀಜಿಗಳಿಗೆ ಅಭಿನಂದನಾ ಪತ್ರ ನೀಡಿದರು. ಶೈಲೇಂದ್ರ ಜೈನ್, ಪ್ರವೀಣ್ ಕುಮಾರ್ ಇಂದ್ರ ವೇಣೂರು, ಎಂ. ಬಾಹುಬಲಿ ಪ್ರಸಾದ್, ನಾಗವರ್ಮ, ಆದಿತ್ಯ ಜೈನ್, ಡಾ.ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಉಪಸ್ಥಿತರಿದ್ದರು.






