ವಿದ್ಯುತ್ ಟವರ್ ಮೇಲೆ ಉರುಳಿ ಬಿದ್ದ ಮರ

ವಿದ್ಯುತ್ ಟವರ್ ಮೇಲೆ ಉರುಳಿ ಬಿದ್ದ ಮರ
Facebook
Twitter
LinkedIn
WhatsApp

ಬೆಳ್ತಂಗಡಿ: 33 ಕೆವಿಎ ವಿದ್ಯುತ್ ಟವರ್ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಓರ್ವ ಗಾಯಗೊಂಡ ಘಟನೆ ಮೇ 20ರ ಬೆಳಗ್ಗೆ ವರದಿಯಾಗಿದೆ.ನಡ ಗ್ರಾಮ ಪಂಚಾಯಿತ್‌ನ ವ್ಯಾಪ್ತಿಯ ಗುರಿಪಳ್ಳ ಸಮೀಪದ ಬಂಡ್ರತ್ತಿಲ್ ಬಳಿ ಬೃಹತ್ ಗಾತ್ರದ ಮರ ವಿದ್ಯುತ್ ಟವರ್ ಮೇಲೆ ಉರುಳಿದೆ. ಈ ಸಂದರ್ಭ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಕನ್ಯಾಡಿಯ ರಮೇಶ್ ಎಂಬವರು ಅದೇ ರಸ್ತೆಯಲ್ಲಿ ಇಂದಬೆಟ್ಟು ಕಡೆ ಹೋಗುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಮರದ ಒಂದು ಭಾಗ ರಮೇಶ್‌ರ ತಲೆಗೆ ಬಡಿದಿದೆ. ಸುದೈವವಶಾತ್ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.ಗಾಯಾಳುವನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಯಿಂದ ಒಂದು ಗಂಟೆಗೂ ಅಧಿಕಕಾಲ ಗುರಿಪಳ್ಳ-ಇಂದಬೆಟ್ಟು ರಸ್ತೆ ಸಂಪರ್ಕ ಕಡಿತಗೊಂಡಿತು. ಮೆಸ್ಕಾಂ ಸಿಬ್ಬಂದಿ ಸ್ಥಳೀಯರ ಸಹಕಾರದಲ್ಲಿ ಮರ ತೆರವುಗೊಳಿಸಿದರು. ಕಕ್ಕಿಂಜೆ ಸಬ್ ಸ್ಟೇಷನ್ ವಿದ್ಯುತ್ ಪೂರೈಕೆಯಲ್ಲಿ ಎರಡು ತಾಸಿಗಿಂತ ಅಧಿಕ ಕಾಲ ವ್ಯತ್ಯಯ ಉಂಟಾಯಿತು. 33 ಕೆವಿಎ ವಿದ್ಯುತ್ ಟವರ್‌ಗೆ ಕೊಂಚ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.

Latest 5

Related Posts