ನಂದಗೋಕುಲ ಗೋಶಾಲೆ ನಿರ್ವಹಣೆಗೆ ನೆರವು.

ನಂದಗೋಕುಲ ಗೋಶಾಲೆ ನಿರ್ವಹಣೆಗೆ ನೆರವು.
Facebook
Twitter
LinkedIn
WhatsApp

ಬೆಳ್ತಂಗಡಿ: ಕಳೆಂಜ ಗ್ರಾಮದ ಕಾಯರ್ತಡ್ಕ ನಂದಗೋಕುಲ ಗೋಶಾಲೆಯ ದೀಪೋತ್ಸವ ಮತ್ತು ಗೋಶಾಲೆ ನಿರ್ವಹಣೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರೂಪಾಯಿ 5ಲಕ್ಷದ ಆರ್ಥಿಕ ನೆರವನ್ನು ನೀಡಿರುತ್ತಾರೆ. ಶ್ರೀ ಕ್ಷೇತ್ರದ ಪರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ರವರು ನಂದಗೋಕುಲ ಗೋಶಾಲೆ ನಿರ್ವಹಣೆಯ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಪದಾಧಿಕಾರಿಗಳಿಗೆ ನೆರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಇಂಜಿನಿಯರ್ ಸುರೇಶ್, ಕಳೆಂಜ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಉಮೇಶ್, ಕಳೆಂಜ ಗ್ರಾಮದ ಸೇವಾ ಪ್ರತಿನಿಧಿ ಜನಾರ್ಧನ, ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟಿನ ಅಧ್ಯಕ್ಷ ಡಾ| ಎಂ.ಎಂ. ದಯಾಕರ್, ಕಾರ್ಯದರ್ಶಿ ಸುಬ್ರಮಣ್ಯ ಕುಮಾರ್ ಅಗರ್ತ, ನಂದಗೋಕುಲ ದೀಪೋತ್ಸವ ಸಂಚಾಲನ ಸಮಿತಿಯ ಪದಾಧಿಕಾರಿಗಳಾದ ರಮೇಶ್ ಧರ್ಮಸ್ಥಳ, ಕುಮಾರನಾಥ, ರಾಘವೇಂದ್ರ ಗೌಡ ಮೊದಲಾದವರು ಉಪಸ್ಥಿತರಿದ್ದರು.ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ವತಿಯಿಂದ ಅಧ್ಯಕ್ಷ ಡಾ|ಎಂ.ಎಂ. ದಯಾಕರ್ ಅವರು ಆರ್ಥಿಕ ನೆರವು ನೀಡಿದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಗೌರವಪೂರ್ವಕ ಕೃತಜ್ಞತೆ ಅರ್ಪಿಸಿದ್ದಾರೆ.

Latest 5

Related Posts