ಬಿಗ್ ಬ್ರೇಕಿಂಗ್ ನ್ಯೂಸ್! ಮಾನಸಿಕ ಅಸ್ವಸ್ಥತೆಯ ಮೇಲೆ ಗ್ಯಾಂಗ್ ರೇಪ್?

ಬಿಗ್ ಬ್ರೇಕಿಂಗ್ ನ್ಯೂಸ್! ಮಾನಸಿಕ ಅಸ್ವಸ್ಥತೆಯ ಮೇಲೆ ಗ್ಯಾಂಗ್ ರೇಪ್?
Facebook
Twitter
LinkedIn
WhatsApp

ಬೆಳ್ತಂಗಡಿ: ಹೆತ್ತಬ್ಬೆಯನ್ನು ಕಳೆದುಕೊಂಡು ತಬ್ಬಲಿಯಾದ ಮಾನಸಿಕ ಅಸ್ವಸ್ಥತೆಯ ಮೇಲೆ ಕಿರಾತಕರ ಗುಂಪೊಂದು ಗ್ಯಾಂಗ್ ರೇಪ್ ನಡೆಸಿದ ಹೃದಯವಿದ್ರಾವಕ ಘಟನೆಯೊಂದು ಗುರುವಾಯನಕೆರೆಯ ಪಿಲಿಚಂಡಿಕಲ್ಲು ಪರಿಸರದಿಂದ ವರದಿಯಾಗಿದೆ.ನಿರಂತರ ಅತ್ಯಾಚಾರಕ್ಕೊಳಗಾಗುತ್ತಿದ್ದ ಈ ಮಾನಸಿಕ ಅಸ್ವಸ್ಥೆ ಇದೀಗ ಆರು ತಿಂಗಳ ಗರ್ಭಿಣಿ ಎನ್ನಲಾಗುತ್ತಿದ್ದು; ಈಕೆಯ ಮಾನಸಿಕ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡ ಮೂಡುಬಿದಿರೆ ಪರಿಸರದ ನಾಲ್ಕಾರು ಮಂದಿ ಕಿರಾತಕರು ಈಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದರು ಎನ್ನಲಾಗಿದೆ. ತಾಯಿಯನ್ನು ಕಳೆದುಕೊಂಡ ಈ ಮಾನಸಿಕ ಅಸ್ವಸ್ಥ ಯುವತಿ ತನ್ನ ಮಾನಸಿಕ ಅಸ್ವಸ್ಥ ಸಹೋದರನೊಂದಿಗೆ ಮನೆಯಲ್ಲಿ ವಾಸ್ತವ್ಯವಿದ್ದು; ಸಂಸಾರದ ಬಂಡಿ ಸಾಗಿಸಲು ತ‌ನ್ನ ಬಂಡಿ ಏರಿ ದಿನಬೆಳಗಾದರೆ ಮನೆಯಿಂದ ಹೊರಡುತ್ತಿದ್ದ ಈಕೆಯ ತಂದೆಗೆ ನಂತರ ರಾತ್ರಿಯ ತನಕ ಮನೆಯ ಕಡೆ ಗಮನವೇ ಇರುತ್ತಿರಲಿಲ್ಲ ಎನ್ನಲಾಗಿದೆ. ಇಡೀ ದಿನ ದುಡಿದು ಮಾನಸಿಕ ಅಸ್ವಸ್ಥ ಮಕ್ಕಳ‌ನ್ನು ಸಾಕಿ ಸಲಹುವುದೇ ಇವರಿಗೆ ಒಂದು ಸವಾಲಾಗಿತ್ತು. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಮೂಡುಬಿದಿರೆ ಪರಿಸರದ ದುಷ್ಟರ ತಂಡ ಹೊಂಚು ಹಾಕಿ ಸಂಚು ಮಾಡಿ ಈ ಅಮಾಯಕರ ಮನೆಗೆ ನುಗ್ಗಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದರು ಎಂದು ತಿಳಿದು ಬಂದಿದೆ. ಕೊನೆಗೂ ಈ ಗ್ಯಾಂಗ್ ರೇಪ್ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು; ಕೆಲ ಅತ್ಯಾಚಾರ ಆರೋಪಿಗಳ ಹೆಡೆಮುರಿ ಕಟ್ಟಿರುವ ಪೊಲೀಸರು ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

Latest 5

Related Posts