ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆಯಿಂದಾಗಿ ಪಾದಾಚಾರಿಗಳದ್ದು ನಿತ್ಯದ ಗೋಳಾಗಿದೆ. ಪಾದಾಚಾರಿಗಳು ರಸ್ತೆ ಬದಿಯಲ್ಲಿ ನಡೆಯಲು ಸಾಕಷ್ಟು ವಾಹನ ಪಾರ್ಕಿಂಗ್ಗಳ ಕಿರಿಕಿರಿಯೊಂದಿಗೆ ಕೆಲ ಅನಧಿಕೃತ ಡೇರೆಗಳೂ ಸಮಸ್ಯೆ ಒಡ್ಡುತ್ತಿದೆ.ಇಂತಹ ಅನಧಿಕೃತ ಡೇರೆಯೊಂದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಮಾರಿಗುಡಿ ದೇವಸ್ಥಾನದ ಎದುರು ತಲೆ ಎತ್ತಿದೆ. ಪ್ರತೀ ಸೋಮವಾರ ವಾರದ ಸಂತೆಯ ದಿನ ಹೆದ್ದಾರಿಯ ಇಕ್ಕೆಲಗಳಲ್ಲೂ ವ್ಯಾಪಾರೀ ಡೇರೆಗಳು ಸಾಮಾನ್ಯ. ಇದೀಗ ಹೆದ್ದಾರಿ ಬದಿಯಲ್ಲಿ ಖಾಯಂ ಆಗಿ ಅನಧಿಕೃತ ಡೇರೆಗಳು ತಲೆ ಎತ್ತಿದರೆ ವಾಹನ ಸವಾರರ ಮತ್ತು ಪಾದಾಚಾರಿಗಳ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಇದರೊಂದಿಗೆ ಇಂತಹ ಅನಧಿಕೃತ ಡೇರೆಗಳ ರಕ್ಷಣೆಗೆ ಸ್ವಾರ್ಥ ರಾಜಕಾರಣಿಗಳು ಪ್ರವೇಶವಾದರೆ ಪಾದಾಚಾರಿಗಳ ಸಮಸ್ಯೆಗೆ ಪರಿಹಾರ ಗಗನಕುಸುಮ ಆಗುವ ಎಲ್ಲ ಸಾಧ್ಯತೆಗಳಿವೆ. ಪಟ್ಟಣ ಪಂಚಾಯತ್ ಆಡಳಿತ ತಕ್ಷಣ ಕಾರ್ಯಾಚರಣೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಖಾಯಂ ಆಗಿ ನೆಲೆ ನಿಂತಿರುವ ಅನಧಿಕೃತ ಡೇರೆಗಳನ್ನು ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಿ ಎಂಬುವುದು ನಾಗರಿಕರ ಆಗ್ರಹ.






