ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಡ ಸರಕಸರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹರೀಶ್ ತನ್ನ ಹುಟ್ಟುಹಬ್ಬವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ನಡ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಪ್ರಸ್ತುತ ಅನಾರೋಗ್ಯದಿಂದ ಬಳಲುತ್ತಿರುವ ಮನೆಯ ಆಧಾರಸ್ತಂಭವಾಗಿದ್ದ ಶೀನಪ್ಪ ಗೌಡ ಮತ್ತು ಅವರ ಬುದ್ಧಿಮಾಂದ್ಯ ಮಗಳ ಜೊತೆಗೆ ಜೀವನ ಸಾಗಿಸುತ್ತಿರುವ ಕುಟುಂಬದೊಂದಿಗೆ ಹರೀಶ್ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ತನ್ನ ಹುಟ್ಟುಹಬ್ಬದ ಪ್ರಯುಕ್ತ ಈ ಕುಟುಂಬಕ್ಕೆ ಅಕ್ಕಿ , ದವಸಧಾನ್ಯಗಳನ್ನು ನೀಡಿ ಸಹಕರಿಸಿದರು.ಈ ಸಂದರ್ಭದಲ್ಲಿ ಗೆಳೆಯರಾದ ದೀಕ್ಷಿತ್, ರಕ್ಷಿತ್, ಜೀತೆಶ್, ಕಿರಣ್, ನಿತಿನ್, ಯತೀಶ್, ಪ್ರಣಿತ್ ಉಪಸ್ಥಿತರಿದ್ದರು. ಈಗಿನ ವಿದ್ಯಾರ್ಥಿಗಳ ಸಹಿತ ಯುವಜನರು ತಮ್ಮ ಹುಟ್ಟುಹಬ್ಬವನ್ನು ಮೋಜು ಮಸ್ತಿನಲ್ಲಿ ಆಚರಣೆ ಮಾಡುವ ಮೂಲಕ ಹಣವನ್ನು ಪೋಲು ಮಾಡುತ್ತಿರುವ ಈ ದಿನಗಳಲ್ಲಿ ಈ ಪಿಯುಸಿ ವಿದ್ಯಾರ್ಥಿಯ ಹುಟ್ಟುಹಬ್ಬ ಆಚರಣೆ ಇತರರಿಗೆ ಮಾದರಿಯಾಗಿದೆ .






