ಬೆಳ್ತಂಗಡಿ: ಬೆಳ್ತಂಗಡಿಯ ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ 2023-24ನೇ ಸಾಲಿನ 14ನೇ ವಾರ್ಷಿಕ ಮಹಾಸಭೆಯು ಆಗಸ್ಟ್ 31ರಂದು ಬೆಳ್ತಂಗಡಿ ಸಾಂತೋಮ್ ಟವರ್ನಲ್ಲಿರುವ ಸಂಘದ ಕಛೇರಿ ವಠಾರದಲ್ಲಿ ಸಂಘದ ಅಧ್ಯಕ್ಷರಾದ ಅನಿಲ್ ಎ.ಜೆ.ಯವರ ಅಧ್ಯಕ್ಷತೆಯಲ್ಲಿ ಜರುಗಿತು. 2023-24 ನೇ ಸಾಲಿನಲ್ಲಿ ರೂಪಾಯಿ 106 ಕೋಟಿ ವ್ಯವಹಾರ ನಡೆಸಿ, ರೂಪಾಯಿ 43.41 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ 15% ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅನಿಲ್ ಎ.ಜೆ. ತಿಳಿಸಿದರು.ಸಂಘದ ಉಪಾಧ್ಯಕ್ಷ ಜಾರ್ಜ್ ಎಮ್.ವಿ. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಪಿ.ಎ. 2023-24ನೇ ಸಾಲಿನ ಲೆಕ್ಕ ಪತ್ರವನ್ನು ಮಂಡಿಸಿ, ಮಹಾಸಭೆಯ ಅನುಮೇದನೆ ಪಡೆದರು. ನಿರ್ದೇಶಕರುಗಳಾದ ಸೆಭಾಸ್ಟೀನ್ ವಿ.ಟಿ., ಜ್ಯೆಸನ್ ಪಟ್ಟೇರಿಲ್, ಅಂದಾನಿ ಕೆ.ಡಿ., ಬಾಬು ತೋಮಸ್, ಬಿಜು ಪಿ.ಪಿ., ಬಿಜು ಎಮ್.ಜೆ., ಸೆಬಾಸ್ಟಿಯನ್, ಸೋಪಿ ಜೋಸೆಫ್, ಫಿಲೋಮಿನಾ ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘದ ನಿರ್ದೇಶಕರಾಗಿ ಸಂಘದ ಅಭಿವೃದ್ದಿಯಲ್ಲಿ ಪ್ರಾಮಾಣಿಕ ಸೇವೆಗೈದ ಸಂಘದ ಬೆಳವಣಿಗೆಗೆ ಕಾರಣಕರ್ತರಾದ ಪ್ರಥಮ ಮತ್ತು ದ್ವಿತೀಯ ಆಡಳಿತ ಮಂಡಳಿ ಸದಸ್ಯರನ್ನು ಸಮ್ಮಾನಿಸಲಾಯಿತು. ಬೆಳ್ತಂಗಡಿ ತಾಲ್ಲೂಕಿನಲ್ಲಿರುವ 16 ಸಿರೋ ಮಲಬಾರ್ ದೇವಾಲಯ ವ್ಯಾಪ್ತಿಯ 2023-24ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾಥಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ನಿರ್ದೇಶಕ ಜ್ಯೆಸನ್ ಪಟೇರಿಲ್ ರವರು ವಂದಿಸಿ, ಕಾರ್ಯಕ್ರಮ ಯಶ್ವಸಿಯಾಗಿ ನಡೆಸಲು ಶಾಖಾ ವ್ಯವಸ್ಥಾಪಕರಾದ ಮ್ಯಾಥ್ಯೂ ಕೆ.ಕೆ., ಸುಜಾ ಜೇಮ್ಸ್ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು. ಬೆಳ್ತಂಗಡಿ ಶಾಖಾ ವ್ಯವಸ್ಥಾಪಕರಾದ ರೇಷ್ಮಾ ಅಬ್ರಾಹಂ ಕಾರ್ಯಕ್ರಮ ನಿರೂಪಿಸಿದರು.






