ಪುಸ್ತಕ ಬಿಡುಗಡೆ

ಪುಸ್ತಕ ಬಿಡುಗಡೆ
Facebook
Twitter
LinkedIn
WhatsApp

ಬೆಳ್ತಂಗಡಿ: ದಶಲಕ್ಷಣಪರ್ವ ಆಚರಣೆಯ ಶುಭಾವಸರದಲ್ಲಿ ಧರ್ಮಸ್ಥಳದಲ್ಲಿರುವ ‘ಮಂಜೂಷಾ’ ವಸ್ತು ಸಂಗ್ರಹಾಲಯದ ಕ್ಯುರೇಟರ್ ಪುಷ್ಪದಂತ ಬರೆದ ‘ಪರ್ಯೂಷಣ ಪರ್ವ’ ಕೃತಿಯನ್ನು ಸೆಪ್ಟೆಂಬರ್ 9ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಹೆಗ್ಗಡೆಯವರ ಬೀಡಿನಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಪುಸ್ತಕದಲ್ಲಿರುವ ಉಪಯುಕ್ತ ಆಧ್ಯಾತ್ಮಿಕ ಮಾಹಿತಿ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಲೇಖಕ ಪುಷ್ಪದಂತ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ನಿರಂಜನ್ ಜೈನ್, ಹಿರಿಯ ಪತ್ರಕರ್ತ ಆರ್.ಯನ್. ಪೂವಣಿ, ಉಪಸ್ಥಿತರಿದ್ದರು.

Latest 5

Related Posts