ಡಾ.ಸುಬ್ರಹ್ಮಣ್ಯ ಭಟ್ಟರ ಮೂರನೇ ಕಾದಂಬರಿ ‘ಅಚ್ಚಣ್ಣ ಭಟ್ರು’ ಬಿಡುಗಡೆ.

ಡಾ.ಸುಬ್ರಹ್ಮಣ್ಯ ಭಟ್ಟರ ಮೂರನೇ ಕಾದಂಬರಿ ‘ಅಚ್ಚಣ್ಣ ಭಟ್ರು’ ಬಿಡುಗಡೆ.
Facebook
Twitter
LinkedIn
WhatsApp

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ಟರ ದಕ್ಷಿಣ ಕನ್ನಡ ಭಾಷಾ ಸೊಗಡಿನ ಮೂರನೇ ಕಾದಂಬರಿ ‘ಅಚ್ಚಣ್ಣ ಭಟ್ರು’ವನ್ನು ಸೆಪ್ಟೆಂಬರ್ 16ರಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದ ತಮ್ಮ ನಿವಾಸ ಬೀಡಿನಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾದಂಬರಿ ಕೃತಿಕಾರ ಡಾ. ಸುಬ್ರಹ್ಮಣ್ಯ ಭಟ್ಟರು, ಅವರ ಮಕ್ಕಳಾದ ಅಭಿಗಮ್ಯ ರಾಮ್, ಆಶ್ಮನ್ ಕೃಷ್ಣ, ಹಿರಿಯ ವಕೀಲರೂ, ಜ್ಯೋತಿಷಿಗಳಾದ ಗಟ್ಟಿಗಾರು ಗೋಪಾಲಕೃಷ್ಣ ಭಟ್ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಬಿ.ಕೆ. ಶೈಲಾರವರು ಉಪಸ್ಥಿತರಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಎಸ್. ಸತೀಶ್ಚಂದ್ರರವರು ಶುಭಾಶಯ ತಿಳಿಸಿದರು. ಕಾದಂಬರಿಗೆ ಬೆಳ್ತಂಗಡಿ ತಾಲೂಕಿನ ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿಯವರು ಮುನ್ನುಡಿ ಬರೆದಿರುತ್ತಾರೆ. ಪ್ರಸ್ತುತ ಕಾದಂಬರಿಯನ್ನು ಮೈಸೂರಿನ ಅಂಬಾರಿ ಪ್ರಕಾಶನದವರು ಪ್ರಕಟಿಸಿದ್ದು ಪ್ರತಿಗಳಿಗಾಗಿ ಲೇಖಕರನ್ನು (9448951856) ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಅಶೋಕ್ ಕುಮಾರ್ ತಿಳಿಸಿದ್ದಾರೆ.

Latest 5

Related Posts