ನಾರಾವಿ ಬಸದಿಯಲ್ಲಿ ಅನಂತನೋಂಪಿ ಆರಾಧನಾ ವಿಧಾನ

ನಾರಾವಿ ಬಸದಿಯಲ್ಲಿ ಅನಂತನೋಂಪಿ ಆರಾಧನಾ ವಿಧಾನ
Facebook
Twitter
LinkedIn
WhatsApp

ಬೆಳ್ತಂಗಡಿ: ನಾರಾವಿ ಗ್ರಾಮದಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಹದಿಮೂರನೆ ವರ್ಷದ ಅನಂತನೋಂಪಿ ಆರಾಧನಾ ವಿಧಾನದ ಪ್ರಥಮ ದಿನದ ಪೂಜೆಯು ಸೆಪ್ಟೆಂಬರ್ 16ರಂದು ನಡೆಯಿತು.12ಮಂದಿ ಶ್ರಾವಕರು ಹಾಗೂ 8ಮಂದಿ ಶ್ರಾವಕಿಯರು ಸೇರಿದಂತೆ ಒಟ್ಟು 20 ಮಂದಿ ನೋಂಪಿಯ ವ್ರತಧಾರಿಗಳಾಗಿ ಶ್ರದ್ಧಾ-ಭಕ್ತಿಯಿಂದ ಭಾಗವಹಿಸಿದರು.ಅಳದಂಗಡಿಯ ಪದ್ಮಪ್ರಭಾ ಇಂದ್ರ ಮತ್ತು ನಾರಾವಿ ಹರ್ಷೇಂದ್ರ ಇಂದ್ರ ಅವರ ಸಹಕಾರದೊಂದಿಗೆ ನೋಂಪಿ ಆರಾಧನಾ ವಿಧಾನ ನಡೆಯಿತು.ಮೂರು ದಿನಗಳಲ್ಲಿ ಅನಂತ ನೋಂಪಿ ನಡೆಯಲಿದ್ದು ಸೆಪ್ಟೆಂಬರ್ 18ರಂದು ಸಮಾಪನಗೊಂಡಿತು.ಮಧ್ಯಾಹ್ನ 12ಗಂಟೆಗೆ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿರಿದ್ದು ಮಂಗಲಪ್ರವಚನ ನೀಡಿದರು.

Latest 5

Related Posts