ಬೆಳ್ತಂಗಡಿ : ರಾಷ್ಟ್ರೀಯ ಮಟ್ಟದ ಭಾರ ಎತ್ತುವಿಕೆ (81 KG ವಿಭಾಗದ) ಸ್ಪರ್ಧೆಯಲ್ಲಿ ಭಾಗವಹಿಸಲು ಹಿಮಾಚಲ ಪ್ರದೇಶಕ್ಕೆ ತೆರಳುವ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಬಂದಾರು ಗ್ರಾಮದ ಕೆ. ತೇಜಸ್ವಿನಿ ಪೂಜಾರಿಯವರಿಗೆ ಅಕ್ಟೋಬರ್ 1ರಂದು ಬೆಳ್ತಂಗಡಿ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ವತಿಯಿಂದ ಆರ್ಥಿಕ ನೆರವು ನೀಡಿ ಶುಭ ಹಾರೈಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಯವೀಕ್ರಮ್ ಕಲ್ಲಾಪು, ಉಪಾಧ್ಯಕ್ಷರಾದ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್., ಕೋಶಾದಿಕಾರಿ ಪ್ರಶಾಂತ್ ಮಚ್ಚಿನ, ಜೊತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು, ವಿದ್ಯಾರ್ಥಿನಿಯ ತಂದೆ ಕೆ. ಚಿದಾನಂದ ಪೂಜಾರಿ ಉಪಸ್ಥಿತರಿದ್ದರು.





