ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ನಿರ್ದೇಶಕರ ಹಾಗೂ ಖಾಯಂ ಆಹ್ವಾನಿತರ ಸಭೆಯು ಸೆಪ್ಟೆಂಬರ್ 29ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಮಡಂತ್ಯಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಶೆಟ್ಟಿ ವರದಿ ವಾಚಿಸಿ ಸದಸ್ಯತನ ಅರ್ಜಿಗಳ ವಿವರವನ್ನು ಸಭೆಯ ಮುಂದಿಟ್ಟರು. ತೆರಿಗೆ ಪಾವತಿಗೆ ವಿಶೇಷ ಶ್ರಮ ವಹಿಸಿದ ಸಂಘದ ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ಧಾ ಇವರನ್ನು ಅಭಿನಂದಿಸಲಾಯಿತು. ತೆರಿಗೆ ಪಾವತಿಸಲು ಸಹಕರಿಸಿದ ಪ್ರಶಾಂತ್ ಶೆಟ್ಟಿ ಮಡಂತ್ಯಾರು ಹಾಗೂ ಎಲ್ಲಾ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಯುವ ವಿಭಾಗಕ್ಕೆ ಆಯ್ಕೆಯಾದ ಪ್ರತೀಕ್ ಶೆಟ್ಟಿ ಮತ್ತು ಮಹಿಳಾ ವಿಭಾಗಕ್ಕೆ ಆಯ್ಕೆಯಾದ ಶ್ರೀಮತಿ ಜಯಲಕ್ಷ್ಮಿ ಸಾಮಾನಿ ಇವರ ತಂಡವನ್ನು ಅಭಿನಂದಿಸಲಾಯಿತು. ಸಂಘಟನಾ ಸಂಚಾಲಕರದ ಸೀತಾರಾಮ ಶೆಟ್ಟಿ ಕೆಂಬರ್ಜೆ ಹಾಗೂ ರಘುರಾಮ ಶೆಟ್ಟಿ ಸಾಧನಾ, ಸಂಘಟನೆ ಹಾಗೂ ನೂತನ ವಲಯದವರು ತಂಡ ರಚನೆಯ ಪ್ರಗತಿಯ ಬಗ್ಗೆ ಸಭೆಗೆ ವಿವರ ನೀಡಿದರು. ವಿದ್ಯಾರ್ಥಿ ನಿಧಿ ಸಂಚಾಲಕರದ ಅಜಿತ್ ಕುಮಾರ್ ಕೊರ್ಯಾರು ಹಾಗೂ ರಾಧಾಕೃಷ್ಣ ಶೆಟ್ಟಿ ಅಂಬೆಟ್ಟು ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು. ಈಗಾಗಲೇ ಆಯ್ಕೆಯಾದ ನೂತನ ವಲಯವಾರು ತಂಡಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಉಪಾಧ್ಯಕ್ಷ ನವೀನ್ ಸಾಮಾನಿ ಕರಂಬಾರುಬೀಡು ಉಪಸ್ಥಿತರಿದ್ದರು. ಜೊತೆಕಾರ್ಯದರ್ಶಿ ಕಿರಣ್ ಶೆಟ್ಟಿ ವಂದಿಸಿದರು.






