ದೇಗುಲಕ್ಕೆ ಆಡಳಿತಾಧಿಕಾರಿ ನೇಮಕ

ದೇಗುಲಕ್ಕೆ ಆಡಳಿತಾಧಿಕಾರಿ ನೇಮಕ
Facebook
Twitter
LinkedIn
WhatsApp

ಬೆಳ್ತಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದಕಟ್ಟೆ ಅಳದಂಗಡಿ ಇಲ್ಲಿನ ವ್ಯವಸ್ಥಾಪನಾ ಸಮಿತಿಯ ಆಡಳಿತಾವಧಿಯು ಮುಕ್ತಾಯವಾಗಿದ್ದು ಅಧಿಕಾರ ಹಸ್ತಾಂತರ ಸೆಪ್ಟೆಂಬರ್ 25ರಂದು ನೆರವೇರಿತು.ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಅಳದಂಗಡಿ ಪಶು ಆಸ್ಪತ್ರೆಯ ಹಿರಿಯ ಪಶುವೈದ್ಯಕೀಯ ಪರೀವೀಕ್ಷಕ ಡಾl ರಮೇಶ ಅವರಿಗೆ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಗಂಗಾಧರ‌ ಮಿತ್ತಮಾರು ಅವರು ನಿರ್ಣಯ ಹಾಗೂ ಲೆಕ್ಕಪುಸ್ತಕಗಳನ್ನು ನೀಡಿ ಅಧಿಕಾರ ಹಸ್ತಾಂತರಿಸಿದರು.ಅರ್ಚಕ ಪ್ರವೀಣ ಮಯ್ಯ, ನಿತ್ಯಾನಂದ ಶೆಟ್ಟಿ ನೊಚ್ಚ, ಸುರೇಶ್ ಶೆಟ್ಟಿ‌ ಕುರೆಲ್ಯ, ಪ್ರಸನ್ನ ಮಯ್ಯ, ಕೃಷ್ಣಪ್ಪ ಉಪಸ್ಥಿತರಿದ್ದರು.

Latest 5

Related Posts