ಚಾರ್ಮಾಡಿಯಲ್ಲಿ ಕಾಡಾನೆ ಹಾವಳಿ

ಚಾರ್ಮಾಡಿಯಲ್ಲಿ ಕಾಡಾನೆ ಹಾವಳಿ
Facebook
Twitter
LinkedIn
WhatsApp

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಮಠದ ಮಜಲು ಎಂಬಲ್ಲಿ ಅನಂತರಾಮ ರಾವ್ ಎಂಬವರ ತೋಟಕ್ಕೆ ಅಕ್ಟೋಬರ್ 5ರ ಮುಂಜಾನೆ ನುಗ್ಗಿದ ಕಾಡಾನೆಗಳ ಹಿಂಡು 60 ಅಡಕೆ ಮರ ಹಾಗೂ ಒಂದು ತೆಂಗಿನ ಮರವನ್ನು ಮುರಿದುಹಾಕಿವೆ. ಹಿಂಡಿನಲ್ಲಿ ಸುಮಾರು 6 ಕಾಡಾನೆಗಳಿರುವ ಶಂಕೆ ವ್ಯಕ್ತವಾಗಿದ್ದು ತೋಟದಲ್ಲಿ ಮೂಡಿರುವ ಆನೆಗಳ ಹೆಜ್ಜೆಗಳು ಇದನ್ನು ದೃಢೀಕರಿಸುತ್ತಿವೆ.ಮಠದ ಮಜಲು ಪರಿಸರದಲ್ಲಿ ಒಂಟಿ ಸಲಗ ಸೇರಿದಂತೆ ಎರಡರಿಂದ ಮೂರು ಆನೆಗಳಿರುವ ಹಿಂಡು ಆಗಾಗ ಕಂಡು ಬರುತ್ತಿದ್ದರೆ, ಈ ಬಾರಿ ಏಕಾಏಕಿ ಆರು ಆನೆಗಳು ಕಂಡುಬಂದಿವೆ ಎಂದು ಸ್ಥಳೀಯ ಪ್ರಕಾಶ್ ನಾರಾಯಣ್ ರಾವ್ ತಿಳಿಸಿದ್ದಾರೆ.

Latest 5

Related Posts