ಬೆಳ್ತಂಗಡಿ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸಹಯೋಗದಲ್ಲಿ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 49ನೇ ಕಾರ್ಯಕ್ರಮವಾಗಿ ‘ಭೀಮ-ದ್ರೌಪದಿ ಸಮರ ಸನ್ನಾಹ’ ಪೌರಾಣಿಕ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರಗಿತು.ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಹರೀಶ ಆಚಾರ್ಯ ಉಪ್ಪಿನಂಗಡಿ ಮತ್ತು ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಜಗದೀಶ ಚಾರ್ಮಾಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ಮತ್ತು ಅರ್ಥಧಾರಿಗಳಾಗಿ ಮಧೂರು ಮೋಹನ ಕಲ್ಲೂರಾಯ (ದ್ರೌಪದಿ ), ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಹರೀಶ ಆಚಾರ್ಯ ಬಾರ್ಯ(ಶ್ರೀ ಕೃಷ್ಣ ), ಜಯರಾಮ ಬಲ್ಯ(ಭೀಮ ), ಸಂಜೀವ ಪಾರೆಂಕಿ (ಧರ್ಮರಾಯ) ಮತ್ತು ಶ್ರುತಿ ವಿಸ್ಮಿತ್ ಬಲ್ನಾಡು (ಸಹದೇವ, ಅರ್ಜುನ ) ಪಾತ್ರ ನಿರ್ವಹಿಸಿದ್ದರು. ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ. ಎಚ್. ಗೇರುಕಟ್ಟೆ ಸ್ವಾಗತಿಸಿ, ರಾಜೇಶ್ ಪೆರ್ಮುಡ ವಂದಿಸಿದರು.






