ಬೆಳ್ತಂಗಡಿ: ಉಜಿರೆಯ ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅಕ್ಟೋಬರ್ 3ರಿಂದ 11ರವರೆಗೆ ನವರಾತ್ರಿ ಉತ್ಸವ ನಡೆಯಿತು. ಪ್ರತಿದಿನ ರಾತ್ರಿ 8 ಗಂಟೆಯಿಂದ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಭಕ್ತಾಧಿಗಳಿಗೆ ಫಲಹಾರ ವಿತರಿಸಲಾಯಿತು.ನವರಾತ್ರಿಯ ಕೊನೆಯ ದಿನ ಮೊಕ್ತೇಸರರಾದ ವಾಸುದೇವ ಸಂಪಿಗೆತ್ತಾಯ ಮತ್ತು ವಾಣಿ ಸಂಪಿಗೆತ್ತಾಯ ಇವರಿಂದ ವಿಶೇಷ ಪೂಜೆ, ಕನ್ನಿಕ-ಸುಹಾಸಿನಿ ಪೂಜೆಯ ಬಳಿಕ ಮುತ್ತೈದೆಯರಿಗೆ ರವಿಕೆಕಣ ವಿತರಿಸಲಾಯಿತು. ಅರ್ಚಕರಾದ ಕೃಷ್ಣ ಹೊಳ್ಳ, ಆಡಳಿತ ಮೊಕ್ತೇಸರಾದ ವಾಸುದೇವ ಸಂಪಗೆತ್ತಾಯ, ಅಪ್ಪು ನಾಯರ್, ರವೀಂದ್ರ ಕಾರಂತ್, ರಾಘವೇಂದ್ರ ಹೊಳ್ಳ, ಆದರ್ಶ ಕಾರಂತ್, ಕೃಷ್ಣ ಪ್ರಸಾದ್, ಉಮಾಮಹೇಶ್ವರ ಭಜನಾ ಮಂಡಳಿಯ ಸದಸ್ಯರು ಮತ್ತಿತರರು ನವರಾತ್ರಿ ಉತ್ಸವದಲ್ಲಿ ಭಾಗವಹಿಸಿದ್ದರು.