ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಅಕ್ಟೋಬರ್ 17ರಂದು ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಮಾನವರಲ್ಲಿರಬೇಕಾದ ಆದರ್ಶ ಗುಣಗಳು, ಅನುಸರಿಸಬೇಕಾಗಿರುವ ನೀತಿ, ಭ್ರಾತೃತ್ವತೆ, ತ್ಯಾಗ, ರಾಜನೀತಿ, ಧರ್ಮ ಪಾಲನೆ ಮುಂತಾದ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ರಾಮಾಯಣ ಎಂಬ ಮಹಾಕಾವ್ಯದ ಮೂಲಕ ಮನುಕುಲಕ್ಕೆ ಪರಿಚಯಿಸಿ ಮಾರ್ಗದರ್ಶನ ನೀಡಿರುವ ಮಹರ್ಷಿಯವರು ಶ್ರೇಷ್ಠರೆನಿಸಿಕೊಂಡು ಸರ್ವರಿಂದಲೂ ಇಂದು ಪೂಜಿಸಲ್ಪಡುತಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಈ ಸಂದರ್ಭದಲ್ಲಿ ನುಡಿದರು.ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮಹರ್ಷಿ ವಾಲ್ಮೀಕಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.