ಬೆಳ್ತಂಗಡಿ: ಡಿಕೆಆರ್‌ಡಿಎಸ್ ಬೆಳ್ತಂಗಡಿಯ ಆಶ್ರಯದಲ್ಲಿ ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಅಕ್ಟೋಬರ್ 19 ರಂದು ಹೆಚ್‌ಐವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮವು ಬೆಳ್ತಂಗಡಿಯಸಾಂತೋಮ್ ಟವರ್ ನಲ್ಲಿ ನಡೆಯಿತು.ಬಂಗಾಡಿ ಮರಿಯಾಂಬಿಕಾ ಚರ್ಚ್‌ನ ಧರ್ಮಗುರು ವಂದನೀಯ ಸೆಬಾಸ್ಟಿಯನ್ ಚೆಲಕ್ಕಪಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ; ಯಾವುದೇ ಸರಕಾರದ ಅನುದಾನವಿಲ್ಲದೆ ಈ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಸಲಹೆ ನೀಡಿ, ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು.ಕಾಂಚಾಲ್ ಅರ್ಚನಾ ಸ್ವಸಹಾಯ ಸಂಘದ ಅಧ್ಯಕ್ಷೆ ಏಲಿಯ ಜೋಸ್ ಹಾಗೂ ಸಂಘದ ಸದಸ್ಯರ ನೇತೃತ್ವದಲ್ಲಿ ಪೌಷ್ಟಿಕ ಆಹಾರದ ಕಿಟ್ ವಿತರಿಸಿದರಲ್ಲದೇ; ರೂಪಾಯಿ 10,000/- ವನ್ನು ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮಕ್ಕೆ ನೀಡಿದರು.ಅರ್ಚನಾ ಸ್ವಸಹಾಯ ಸಂಘದ ಸದಸ್ಯೆ ಜಾನೆಟ್ ರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪುಷ್ಪರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿಕೆಆರ್‌ಡಿಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಬಿನೋಯಿ ಎ.ಜೆ. ಪ್ರಾಸ್ತಾವಿಕವಾಗಿ ಮಾತನಾಡಿ; ದೇವಾಲಯಕ್ಕೆ ಹೋದರೆ ಕಣ್ಣು ಮುಚ್ಚಿ ನಿಲ್ಲಬೇಕು; ಗ್ರಂಥಾಲಯಕ್ಕೆ ಹೋದರೆ ಕಣ್ಣು ತೆರೆದು ನಿಲ್ಲಬೇಕುಎಂದರಲ್ಲದೇ, ಈ ಕಾರ್ಯಕ್ರಮದ ಮೂಲಕ ಉತ್ತಮ ಅರಿವನ್ನು ಪಡೆದು ಮುನ್ನಡೆಯೋಣ ಎಂದರು. ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಪುಷ್ಪ ಪ್ರಾರ್ಥಿಸಿದರು. ಡಿಕೆಆರ್‌ಡಿಎಸ್ ಸಂಸ್ಥೆಯ ಸoಯೋಜಕಿ ಶ್ರೇಯಾ ಸ್ವಾಗತಿಸಿದರು. ಕಾರ್ಯಕರ್ತ ಜೋನ್ಸನ್ ವಂದಿಸಿದರು.ಕಾರ್ಯಕರ್ತ ಮಾರ್ಕ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾತು.