ಬೆಳ್ತಂಗಡಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಲಾಯ್ಲ ಗ್ರಾಮದ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ನವೆಂಬರ್ 29ರಂದು ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವು ಅದ್ದೂರಿಯಾಗಿ ನಡೆಯಿತು. ಸಾವಿರಾರು ಮಂದಿ ಕಲಾಭಿಮಾನಿಗಳು ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿ’ ಯಕ್ಷಗಾನ ಪ್ರಸಂಗ ವೀಕ್ಷಿಸಿದರು. ಸೇವಾಕರ್ತರಾದ ಲಾಯ್ಲ ಗ್ರಾಮದ ಕೋಡಿಯೇಲು ಶ್ರೀಮತಿ ಜಯಂತಿ ಶೆಟ್ಟಿ ಮತ್ತು ಮಕ್ಕಳು ಬಂದಂತಹ ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡು ಸತ್ಕರಿಸಿದರು.