ಬೆಳ್ತಂಗಡಿ: ಬೆಳ್ತಂಗಡಿ ಮೂರು ಮಾರ್ಗದ ಬಳಿ ಕಳೆದ 25 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ನ್ಯಾಯವಾದಿ ಮತ್ತು ನೋಟರಿ ಪಬ್ಲಿಕ್ ಮುರಳಿ ಬಲಿಪರ ಕಛೇರಿಯು ಬೆಳ್ತಂಗಡಿ ಆಡಳಿತ ಸೌಧದ ಅಮೀಪವಿರುವ ವಿಘ್ನೇಶ್ ಸಿಟಿ ಸಂಕೀರ್ಣಕ್ಕೆ ಸ್ಥಳಾಂತರಗೊಂಡಿದ್ದು; ಇದರ ಉದ್ಘಾಟನಾ ಸಮಾರಂಭವು ಡಿಸೆಂಬರ್ 24ರಂದು ನೆರವೇರಿತು.ದೀಪ ಪ್ರಜ್ವಲನಗೈದು ನೂತನ ಕಛೇರಿಯನ್ನು ಉದ್ಘಾಟಿಸಿದ ನ್ಯಾಯವಾದಿ ಮುರಳಿಯವರ ಮಾವ ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಕೆ. ಸುಬ್ರಹ್ಮಣ್ಯ ಭಟ್ ಮತ್ತು ಅವರ ಪತ್ನಿ ಫಿಶರಿಸ್ ಇಲಾಖೆಯ ನಿವೃತ್ತ ಅಧಿಕಾರಿ ಉಮಾ ಎಸ್. ಭಟ್ ಆಶೀರ್ವಾದ ನೀಡಿ ಶುಭ ಹಾರೈಸಿದರು.ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್, ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಡಿ., ಮುರಳಿಯವರ ಅಣ್ಣ ಸುರೇಶ್ ಭಟ್ ಕೊಜಂಬೆ, ಬಂಧುಗಳಾದ ಜಯರಾಮ ಪಾಂಡಿಗಾಯ, ಕಾವ್ಯಶ್ರೀ, ವೃಂದಾ, ವಿದ್ಯಾ ಎ. ಭಟ್, ಡಾ| ಸೌಮ್ಯಾ, ಜಗದೀಶ್, ಸುಜಾತಾ, ಸುನಿಲ್, ಪ್ರೀತಮ್, ರೇಷ್ಮಾ, ಸ್ಮಿತಾ, ಪ್ರಮುಖರಾದ ಅರೆಕ್ಕಲ್ ರಾಮಚಂದ್ರ ಭಟ್, ಶೈಲೇಶ್ ಠೋಸರ್, ಬಾಲಕೃಷ್ಣ ಶೆಟ್ಟಿ ಸಾಲಿಗ್ರಾಮ, ಶ್ಯಾಮ್ ಭಟ್, ವಾಲ್ಟರ್ ಸಿಕ್ವೇರಾ, ಅಬ್ದುಲ್ ಖಾದರ್ ಕಕ್ಕಿಂಜೆ, ಹನೀಫ್ ಉಜಿರೆ, ಜಗನ್ನಾಥ ಮತ್ತಿತರರು ಈ ಸರಳ ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಯವಾದಿ ಮುರಳಿ; ನಾನು ಆರಂಭದಿಂದಲೂ ನನ್ನ ಆದಾಯದಲ್ಲಿ ಒಂದು ಭಾಗವನ್ನು ಸಮಾಜದ ಅಶಕ್ತರಿಗೆ ಕೊಡುವ ಕೆಲಸ ಮಾಡುತ್ತಾ ಬಂದಿದ್ದೇನೆ. ನನಗೆ ಇದರಲ್ಲಿ ಆತ್ಮತೃಪ್ತಿ ಇದೆ. ನಾನು ಇರುವಷ್ಟು ಸಮಯವೂ ಸಮಾಜದ ಅಶಕ್ತರಿಗೆ ಮಾತ್ರವಲ್ಲ; ಅಗತ್ಯ ಉಳ್ಳವರಿಗೆ ಸಹಾಯ ಮಾಡುತ್ತೇನೆ ಎಂದರು. ಅಶ್ರಫ್ ಆಲಿಕುಂಞಿ ನಿರೂಪಿಸಿ,ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಆಮಂತ್ರಿತ ಗಣ್ಯರನ್ನು ನ್ಯಾಯವಾದಿ ಮುರಳಿ, ಅವರ ಧರ್ಮಪತ್ನಿ ಮನೋರಮಾ ಹಾಗೂ ಮಕ್ಕಳಾದ ಮಯೂರ್ ಬಲಿಪ ಮತ್ತು ಮಂದಾರ ಬಲಿಪ ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿದರು.